ಕರ್ನಾಟಕ

karnataka

ETV Bharat / state

ಕುಕ್ಕೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಿರ್ಲಾ ಗ್ರೂಪ್ ಕುಟುಂಬ - ದೇವಳದಲ್ಲಿ ಆಶ್ಲೇಷ ಬಲಿ ಮತ್ತು ಮಹಾಪೂಜೆ

ಬಿರ್ಲಾ ಗ್ರೂಪ್ಸ್ ಆಫ್​ ಕಂಪನಿಯ ಅಧ್ಯಕ್ಷ ಚಂದ್ರಕಾಂತ್ ಬಿರ್ಲಾ, ಅವರ ತಾಯಿ ನಿರ್ಮಲಾ ಬಿರ್ಲಾ ಕುಟುಂಬ ಸಮೇತರಾಗಿ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿ, ಶ್ರೀ ದೇವಳದಲ್ಲಿ ಆಶ್ಲೇಷ ಬಲಿ ಮತ್ತು ಮಹಾಪೂಜೆ ಸೇವೆ ಸಲ್ಲಿಸಿದರು.

ಕುಕ್ಕೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಿರ್ಲಾ ಗ್ರೂಪ್ ಕುಟುಂಬ
the-birla-group-family-visited-kukke-and-offered-special-pooja

By

Published : Oct 14, 2022, 5:40 PM IST

ಸುಬ್ರಹ್ಮಣ್ಯ (ಸುಳ್ಯ ತಾಲೂಕು): ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆಯ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇಶದ ಪ್ರತಿಷ್ಠಿತ ಬಿರ್ಲಾ ಗ್ರೂಪ್ಸ್ ಆಫ್​ ಕಂಪನಿಯ ಅಧ್ಯಕ್ಷ ಚಂದ್ರಕಾಂತ್ ಬಿರ್ಲಾ, ಅವರ ತಾಯಿ ನಿರ್ಮಲಾ ಬಿರ್ಲಾ ಕುಟುಂಬ ಸಮೇತರಾಗಿ ಗುರುವಾರ ಭೇಟಿ ನೀಡಿ, ಶ್ರೀ ದೇವಳದಲ್ಲಿ ಆಶ್ಲೇಷ ಬಲಿ ಮತ್ತು ಮಹಾಪೂಜೆ ಸೇವೆ ಸಲ್ಲಿಸಿದರು.

ಗುರುವಾರ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಅವರು ಸಂಕಲ್ಪ ನೆರವೇರಿಸಿ ಆಶ್ಲೇಷ ಬಲಿ ಸೇವೆ ನೆರವೇರಿಸಿದರು. ಬಳಿಕ ಶ್ರೀ ದೇವರ ದರುಶನ ಪಡೆದು ಮಹಾಪೂಜೆ ಸೇವೆ ಸಮರ್ಪಿಸಿದರು. ಶ್ರೀ ದೇವಳದ ಅರ್ಚಕರು ಅವರಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿ ಹರಸಿದರು.

ಗೌರವಾರ್ಪಣೆ: ಬಳಿಕ ಶ್ರೀ ದೇವಳದ ಆದಿಶೇಷದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ನಿರ್ಮಲಾ ಬಿರ್ಲಾ ಅವರನ್ನು ಗೌರವಿಸಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ವನಜಾ ವಿ. ಭಟ್, ಶೋಭಾ ಗಿರಿಧರ್, ಪಿ.ಜಿ.ಎಸ್.ಎನ್. ಪ್ರಸಾದ್, ಮನೋಹರ ರೈ, ಲೋಕೇಶ್ ಮುಂಡುಕಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಮನೋಜ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ 'ಮೂಲಮೃತಿಕೆ' ಪ್ರಸಾದ ವಿತರಣೆ

ABOUT THE AUTHOR

...view details