ಕರ್ನಾಟಕ

karnataka

ETV Bharat / state

ಗಾಂಜಾ ಸಾಗಾಟ ಆರೋಪ : ಕೇರಳ ಮೂಲದ ವ್ಯಕ್ತಿಯ ಬಂಧನ - ಕೇರಳ ಮೂಲದ ವ್ಯಕ್ತಿಯ ಬಂಧನ

ಗಾಂಜಾ ಸಾಗಿಸುತ್ತಿದ್ದ ಆರೋಪದಲ್ಲಿ ವಿಟ್ಲ ಪೊಲೀಸರು ಕೇರಳ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

The arrest of a person based in Kerala
ಗಾಂಜಾ ಸಾಗಾಟ ಆರೋಪ : ಕೇರಳ ಮೂಲದ ವ್ಯಕ್ತಿಯ ಬಂಧನ

By

Published : Sep 8, 2020, 11:00 PM IST

ಬಂಟ್ವಾಳ : ಖಚಿತ ಮಾಹಿತಿ ಮೇರೆಗೆ ಆಟೊರಿಕ್ಷಾದಲ್ಲಿ ಗಾಂಜಾ ಸಾಗಾಟ ಹಾಗೂ ಮಾರಾಟ ಮಾಡಲು ಯತ್ನಿಸಿದ ಕೇರಳ ಮೂಲದ ಕೈಕಂಬ ನಿವಾಸಿ ಮಹಮ್ಮದ್ ಅಲಿ ಯಾನೆ ಅಸ್ರು (27) ಎಂಬಾತನನ್ನು ವೀರಕಂಬ ಗ್ರಾಮದ ಬೆಂಜಂತಿಮಾರು ಎಂಬಲ್ಲಿ ಬಂಧಿಸಲಾಗಿದೆ.

ಗಾಂಜಾ ಸಾಗಾಟ ಆರೋಪ : ಕೇರಳ ಮೂಲದ ವ್ಯಕ್ತಿಯ ಬಂಧನ

ರಿಕ್ಷಾದಲ್ಲಿ ಸುಮಾರು 840 ಗ್ರಾಂ ನಷ್ಟು ಗಾಂಜಾ ಪತ್ತೆಯಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕುದ್ದುಪದವು ಎಂಬಲ್ಲಿ ಗಮನ ಬೇರೆಡೆಗೆ ಸೆಳೆದು ಹಣ ಕಳವು ಮಾಡಿದ ಪ್ರಕರಣದಲ್ಲಿ ಬಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾನೆ.

ಕೇರಳದಲ್ಲಿ ಸುಮಾರು 10 ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ವಿಟ್ಲ ಠಾಣೆಯಲ್ಲಿ ಈತನ ಮೇಲೆ ತಲಾ ಒಂದು ಪ್ರಕರಣವಿದೆ. ಡಿಸಿಐಬಿ ಪೊಲೀಸ್ ನಿರೀಕ್ಷರಾದ ಚೆಲುವರಾಜು ಅವರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳಾದ ಲಕ್ಷ್ಮಣ್ ಕೆಜಿ, ಉದಯ ರೈ, ಪ್ರವೀಣ್ ಎಂ., ತಾರಾನಾಥ್, ಪ್ರವೀಣ್ ರೈ, ಚಾಲಕ ಶೋನ್ ಷಾ, ಸುರೇಶ್ ಅವರ ತಂಡ ಬಂದಿಸುವಲ್ಲಿ ಯಶಸ್ವಿಯಾಗಿದೆ. ವಿಟ್ಲ ಠಾಣೆಯ ಸಿಬ್ಬಂದಿಗಳಾದ ಜಯರಾಮ, ಪ್ರಸನ್ನ, ಲೋಕೇಶ್ ಸಹಕರಿಸಿದರು.

ABOUT THE AUTHOR

...view details