ಕರ್ನಾಟಕ

karnataka

ETV Bharat / state

ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿ ಜೋರು.. ಜವಳಿ ಉದ್ಯಮಿಗಳ ಮೊಗದಲ್ಲಿ ನಗು - Textile industry recovery in Dakshina kannada

ಕೊರೊನಾ ಹಾವಳಿಯ ಬಳಿಕ ಜವಳಿ ಉದ್ಯಮ ತುಸು ಚೇತರಿಕೆ ಕಂಡಿದೆ. ವ್ಯಾಪಾರವಿಲ್ಲದೆ ವ್ಯಾಪಾರಿಗಳು ಕಂಗೆಟ್ಟಿದ್ದ ಉದ್ಯಮಿಗಳ ಮೊಗದಲ್ಲಿ ಮಂದಹಾಸ ಮೂಡಿದೆ..

Textile industry recovery in Dakshina kannada
ಜವಳಿ ಉದ್ಯಮ

By

Published : Nov 11, 2020, 8:38 PM IST

ಮಂಗಳೂರು : ದೀಪಾವಳಿ ಹಬ್ಬದ ಸೀಸನ್​​ನಲ್ಲಿ ಹೊಸ ಬಟ್ಟೆ ಖರೀದಿಸುವವರ ಸಂಖ್ಯೆ ಹೆಚ್ಚಾಗಿದ್ದು, ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಜವಳಿ ಉದ್ಯಮಿಗಳ ಮೊಗದಲ್ಲಿ ತುಸು ನಗು ತರಿಸಿದೆ.

ಲಾಕ್​ಡೌನ್​ ಅವಧಿಯಲ್ಲಿ ಉಳಿದುಕೊಂಡಿದ್ದ ಬಟ್ಟೆಗಳಿರುವ ಕಾರಣ, ಹೊಸ ಸ್ಟಾಕ್​ ಅನ್ನು ಸ್ವಲ್ಪಮಟ್ಟಿಗೆ ತರಿಸಿಕೊಂಡಿದ್ದಾರೆ. ಹಬ್ಬದ ಸೀಸನ್​​ನಲ್ಲಿ ಬಟ್ಟೆಗಳ ಖರೀದಿ ಜೋರಾಗಿದ್ದು, ಮಾಲೀಕರು ಮತ್ತಷ್ಟು ಹೊಸ ಸ್ಟಾಕ್​ ತರಿಸಿಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿ ಜೋರು

ಹಬ್ಬದ ವೇಳೆ ಜವಳಿ ಉದ್ಯಮ ತುಸು ಚೇತರಿಕೆ ಕಂಡಿದ್ದು, ಇದು ಮುಂದುವರಿಯುತ್ತದೆ ಎನ್ನುವ ವಿಶ್ವಾಸವು ಜವಳಿ ವ್ಯಾಪಾರಿಗಳಲ್ಲಿಲ್ಲ. ಕಳೆದ ವರ್ಷದ ಹಬ್ಬದ ಸೀಸನ್​​ಗೆ ಹೋಲಿಸಿದರೆ ಈ ಬಾರಿ ಶೇ.25ರಷ್ಟು ವ್ಯಾಪಾರ ನಡೆದಿದೆ ಎನ್ನುತ್ತಾರೆ ಮಂಗಳೂರಿನ ಜವಳಿ ಅಂಗಡಿ ಮಾಲೀಕ ಉಸ್ಮಾನ್.

ABOUT THE AUTHOR

...view details