ಕರ್ನಾಟಕ

karnataka

ETV Bharat / state

ಕುದ್ರೋಳಿ ದೇಗುಲ ಸಂಪೂರ್ಣ ಸ್ಯಾನಿಟೈಸಿಂಗ್‌: ನಾಳೆಯಿಂದ ಭಕ್ತರಿಗೆ ಮುಕ್ತ - Mangalore Kudroli Temple sanitizing

ಮಂಗಳೂರು ನಗರದ ಕುದ್ರೋಳಿ‌ ಗೋಕರ್ಣನಾಥ ದೇವಸ್ಥಾನವನ್ನು ಸಂಪೂರ್ಣ ಸ್ವಚ್ಚ ಮಾಡಲಾಗುತ್ತಿದ್ದು, ಎಲ್ಲಾ ಕಡೆಗಳಲ್ಲಿ ಸ್ಯಾನಿಟೈಸರ್ ಮಾಡಲಾಗುತ್ತಿದೆ.

temple-open-kudroli-temple-full-sanitizing
ಕುದ್ರೋಳಿ ದೇಗುಲವನ್ನು ಸಂಪೂರ್ಣ ಸ್ಯಾನಿಟೈಸರ್​ ಮಾಡಿದ ಸಿಬ್ಬಂದಿ

By

Published : Jul 4, 2021, 4:24 PM IST

ಮಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು‌ ಹರಡದಂತೆ ಜಾರಿಗೊಳಿಸಿರುವ ನಿರ್ಬಂಧಗಳನ್ನು ಸಡಿಲಿಸಿ ನಾಳೆಯಿಂದ 3ನೇ ಹಂತದ ಅನ್​ಲಾಕ್​ ಘೋಷಣೆಯಾಗಿದೆ‌. ಈ ಹಿನ್ನೆಲೆಯಲ್ಲಿ ನಾಳೆ ಮಾಲ್​ಗಳು ಸೇರಿದಂತೆ ದೇವಾಲಯಗಳನ್ನೂ ತೆರೆಯಲು ಅವಕಾಶ ನೀಡಲಾಗಿದೆ.

ಕುದ್ರೋಳಿ ದೇಗುಲವನ್ನು ಸಂಪೂರ್ಣ ಸ್ಯಾನಿಟೈಸರ್​ ಮಾಡಿದ ಸಿಬ್ಬಂದಿ

ಈ ಮೂಲಕ‌ ಎರಡು ತಿಂಗಳ ಬಳಿಕ ಭಕ್ತರಿಗೆ ನಾಳೆಯಿಂದ ದೇವಾಲಯ ಪ್ರವೇಶಿಸಲು ಅವಕಾಶ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಇಂದಿನಿಂದಲೇ ಸಿದ್ಧತೆ ನಡೆಯುತ್ತಿದೆ.

ನಗರದ ಕುದ್ರೋಳಿ‌ ಶ್ರೀ ಗೋಕರ್ಣನಾಥ ದೇವಸ್ಥಾನವನ್ನು ಸಂಪೂರ್ಣ ಸ್ವಚ್ಚ ಮಾಡಲಾಗುತ್ತಿದ್ದು, ಎಲ್ಲಾ ಕಡೆಗಳಲ್ಲಿ ಸ್ಯಾನಿಟೈಸರ್ ಮಾಡಲಾಗುತ್ತಿದೆ. ದೇವಳದ ಸಿಬ್ಬಂದಿ ದೇವಸ್ಥಾನದ ಒಳಾಂಗಣ, ಹೊರಾಂಗಣ, ಅನ್ನಛತ್ರಗಳಲ್ಲೂ ಸ್ಯಾನಿಟೈಸೆಷನ್​ ಮಾಡಿದ್ದಾರೆ.

ನಾಳೆ ಸೋಮವಾರವಾಗಿರುವ ಕಾರಣ ಭಕ್ತರ ಸಂಖ್ಯೆ ಹೆಚ್ಚಿರುವ ಸಾಧ್ಯತೆ ಇದೆ. ಆದರೆ ಭಕ್ತರಿಗೆ ಕೇವಲ ದರ್ಶನಕ್ಕೆ ಮಾತ್ರ ದೇವಸ್ಥಾನದ ಆಡಳಿತ ಮಂಡಳಿ ವ್ಯವಸ್ಥೆ ಕಲ್ಪಿಸಿದೆ.

ಇದನ್ನೂ ಓದಿ:ಶೇ.80ರಷ್ಟು ವ್ಯಾಕ್ಸಿನೇಷನ್ ಮಾಡಿ.. ಸರ್ಕಾರಕ್ಕೆ ಮೂರು ತಿಂಗಳ ಡೆಡ್​ಲೈನ್​ ನೀಡಿದ್ರು ಡಿಕೆಶಿ

ABOUT THE AUTHOR

...view details