ಕರ್ನಾಟಕ

karnataka

ETV Bharat / state

ಕುಕ್ಕೆ ಸುಬ್ರಮಣ್ಯಕ್ಕೆ ತೆಲುಗು ನಟ ಪವನ್ ಕಲ್ಯಾಣ್ ಭೇಟಿ; ಸ್ವಚ್ಛತಾ ಕಾರ್ಯಕ್ರಮಕ್ಕೆ ಮೆಚ್ಚುಗೆ - ತೆಲುಗು ನಟ ಪವನ್ ಕಲ್ಯಾಣ್ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ

ನಟ/ರಾಜಕಾರಣಿ ಪವನ್ ಕಲ್ಯಾಣ್ ಇಂದು ನಾಡಿನ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಕುಕ್ಕೆ ಸುಬ್ರಮಣ್ಯಕ್ಕೆ ನಟ ಪವನ್ ಕಲ್ಯಾಣ್ ಭೇಟಿ
ಕುಕ್ಕೆ ಸುಬ್ರಮಣ್ಯಕ್ಕೆ ನಟ ಪವನ್ ಕಲ್ಯಾಣ್ ಭೇಟಿ

By

Published : Mar 29, 2022, 4:45 PM IST

ಸುಬ್ರಹ್ಮಣ್ಯ: ತೆಲುಗು ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ರಾಜ್ಯದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದ ಅವರು, ಆದಿ ಸುಬ್ರಹ್ಮಣ್ಯದ ನಾಗ ಹುತ್ತಕ್ಕೆ ವಸ್ತ್ರ ಸಮರ್ಪಿಸಿ ಪ್ರಾರ್ಥಿಸಿದರು.


ಕುಕ್ಕೆ ಕ್ಷೇತ್ರದಲ್ಲಿ ಬೆಳಗಿನ ಉಪಹಾರ ಸೇವಿಸಿದ ಪವನ್ ಕಲ್ಯಾಣ್, ಪ್ರತಿ ಏಕಾದಶಿಯಂದು ದೇವಸ್ಥಾನದಲ್ಲಿ ನಡೆಸುವ ಸ್ವಚ್ಛತಾ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲಾ ದೇವಸ್ಥಾನಗಳೂ ಕುಕ್ಕೆ ಸುಬ್ರಹ್ಮಣ್ಯದ ಕಾರ್ಯವನ್ನು ಅನುಸರಿಸಬೇಕು. ಇದರಿಂದ ಪರಿಸರ ಸ್ವಚ್ಛತೆಯ ಬಗ್ಗೆ ಜಾಗೃತಿ ಸಾಧ್ಯ ಎಂದರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯಿಂದ ನಟನನ್ನು ಸ್ವಾಗತಿಸಿ, ಸನ್ಮಾನಿಸಲಾಯಿತು.

ಪವನ್ ಕಲ್ಯಾಣ್ ಅವರನ್ನು ಸನ್ಮಾನಿಸಿದ ಕುಕ್ಕೆ ಸುಬ್ರಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ

For All Latest Updates

TAGGED:

ABOUT THE AUTHOR

...view details