ಮಂಗಳೂರು:ರೋಗಗ್ರಸ್ಥ ಉದ್ಯಮಗಳನ್ನು ಪುನಶ್ಚೇತನ ಮಾಡುವಂತೆ ಜೆಎನ್ಯು ವಿಶ್ವವಿದ್ಯಾನಿಲಯವನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಜೆಎನ್ಯು ಪುನರ್ ನಿರ್ಮಾಣ ಮಾಡಬೇಕು: ಸಂಸದ ತೇಜಸ್ವಿ ಸೂರ್ಯ - ತೇಜಸ್ವಿ ಸೂರ್ಯ ಲೇಟೆಸ್ಟ್ ನ್ಯೂಸ್
ನಮ್ಮ ತೆರಿಗೆ ದುಡ್ಡಿನಲ್ಲಿ ಜೆಎನ್ಯುನಲ್ಲಿ ಶಿಕ್ಷಣ ಪಡೆದವರಿಂದ ಸಮಾಜಕ್ಕೆ ಯಾವುದೇ ಕೊಡುಗೆ ನೀಡಲಾಗುತ್ತಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಅಭಿಪ್ರಯಪಟ್ಟಿದ್ದಾರೆ.
ನಗರದ ಟಿಎಂಎ ಪೈ ಸಭಾಂಗಣದಲ್ಲಿ ಮಂಗಳೂರು ಲಿಟರೆಸಿ ಫೌಂಡೇಶನ್ ಆಯೋಜಿಸಿದ್ದ ಮಂಗಳೂರು ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ 'ಜೆಎನ್ಯು - ವಾಟ್ ಈಸ್ ದ ರೈಟ್ ಇನ್ ದ ಲೆಫ್ಟ್' ಎಂಬ ವಿಚಾರ ಕುರಿತು ನಡೆದ ಸಂವಾದದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮ ತೆರಿಗೆ ದುಡ್ಡಿನಲ್ಲಿ ಜೆಎನ್ಯು ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು ಸಮಾಜಕ್ಕೆ ಯಾವುದೇ ಕೊಡುಗೆ ನೀಡುತ್ತಿಲ್ಲ. ಇಡೀ ವರ್ಷಕ್ಕೆ 240 ರೂ. ಟ್ಯೂಷನ್ ಶುಲ್ಕ, 9 ರೂಪಾಯಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸರ್ಕಾರ ಪ್ರತಿಯೊಂದು ವಿದ್ಯಾರ್ಥಿಗೆ 7 ಲಕ್ಷ ರೂ. ವ್ಯಯಿಸುತ್ತದೆ. ಅವರಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ. ಹೀಗಿರುವಾಗ ಸರ್ಕಾರ ಯಾಕೆ ಹಣ ಹೂಡಬೇಕು ಎಂದು ಪ್ರಶ್ನಿಸಿದರು. ಈ ಕಾರಣದಿಂದಾಗಿ ಜೆಎನ್ಯು ಪುನರ್ ನಿರ್ಮಾಣ ಮಾಡಬೇಕು. ಆಡಳಿತ, ಆರ್ಥಿಕ ವಿಚಾರಗಳಲ್ಲಿ ಬದಲಾವಣೆಗಳನ್ನು ತರಬೇಕು ಎಂದಿದ್ದಾರೆ.