ಸುಳ್ಯ(ದಕ್ಷಿಣ ಕನ್ನಡ):ಹದಿಹರೆಯದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಸುಳ್ಯ: ತಡರಾತ್ರಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವತಿ - ಸುಳ್ಯದಲ್ಲಿ ಯುವತಿ ಆತ್ಮಹತ್ಯೆ
ಸುಳ್ಯ ಸಮೀಪದ ನೆಲ್ಲೂರು ಕೆಮ್ರಾಜೆಯ ಯುವತಿಯೋರ್ವಳು ನಿನ್ನೆ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
![ಸುಳ್ಯ: ತಡರಾತ್ರಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವತಿ Prasanna](https://etvbharatimages.akamaized.net/etvbharat/prod-images/768-512-9284014-699-9284014-1603447464409.jpg)
ಪ್ರಸನ್ನ
ಬೊಳ್ಳಾಜೆಯ ಗಂಗಾಧರ ನಾಯ್ಕ ಎಂಬುವರ ಪುತ್ರಿ ಪ್ರಸನ್ನ ಆತ್ಮಹತ್ಯೆ ಮಾಡಿಕೊಂಡ ಯುವತಿ. ನಿನ್ನೆ ರಾತ್ರಿ ವೇಳೆ ಕೋಣೆಯಲ್ಲಿ ಯುವತಿ ನೇಣು ಬಿಗಿದು ಸಾವಿಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.