ಕರ್ನಾಟಕ

karnataka

ಕಾರ್ಮಿಕರ ಕೊರತೆ ನೀಗಿಸಲು ಯಾಂತ್ರೀಕರಣ ಕೃಷಿ ಪದ್ಧತಿ ಸೂಕ್ತ: ಡಾ.ಡಿ.ವೀರೇಂದ್ರ ಹೆಗ್ಗಡೆ

By

Published : Oct 29, 2020, 1:54 PM IST

ಯಂತ್ರಗಳನ್ನು ಬಳಸುವುದರಿಂದ ಕೃಷಿ ಕಾರ್ಮಿಕರ ಖರ್ಚು-ವೆಚ್ಚ ಕಡಿಮೆ ಮಾಡಿಕೊಳ್ಳಬಹುದು. ಸಮಯದ ಉಳಿತಾಯದ ಜೊತೆಗೆ ಎಕರೆವಾರು ಕೆಲಸ ಆಗುತ್ತದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

dr. virendra heggade
ಡಾ.ಡಿ.ವೀರೇಂದ್ರ ಹೆಗ್ಗಡೆ.

ಬೆಳ್ತಂಗಡಿ: ಬಂಡವಾಳ ಹೂಡಿಕೆ ಕಡಿಮೆ ಮಾಡಿ, ಹೆಚ್ಚು ಆದಾಯ ಗಳಿಸಿ, ಯಂತ್ರೋಪಕರಣ ಬಳಕೆಯಿಂದ ಕೃಷಿ ಆಕರ್ಷಣೆಯಾಗಲಿ ಎಂಬುದೇ ನನ್ನ ಆಶಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್, ಕೃಷಿ ವಿಭಾಗ ಕೇಂದ್ರ ಕಚೇರಿ ಧರ್ಮಸ್ಥಳ ಇದರ ವತಿಯಿಂದ ಕ್ಷೇತ್ರದ ಭತ್ತದ ಗದ್ದೆಗಳಲ್ಲಿ ಯಾಂತ್ರೀಕೃತ ಹಾಗೂ ಸಾಂಪ್ರದಾಯಿಕ ಭತ್ತದ ಬೇಸಾಯ ವಿಧಾನಗಳನ್ನು ಅಳವಡಿಸಿ, ಅಧ್ಯಯನ ನಡೆಸಿ, ಅನುಷ್ಠಾನಗೊಳಿಸಿದ ಕ್ಷೇತ್ರದ ದೇವಳದ ಹಿಂಭಾಗದ ಗದ್ದೆಯಲ್ಲಿ ಭತ್ತದ ಕಟಾವು ಕಾರ್ಯವನ್ನು ಬುಧವಾರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿದರು

ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗ ವಿಕಾಸ ಆಗಿರುವುದರಿಂದ ಜನ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆ ಆಗಿದೆ. ಕೃಷಿ ಕ್ಷೇತ್ರದಲ್ಲೂ ಯಂತ್ರೋಪಕರಣ ಬಳಕೆಯಿಂದ ರೈತರಿಗೆ ಲಾಭದಾಯಕವಿದೆ. ಆದರೆ, ವಿಶೇಷವಾಗಿ ಕೆಲವು ವಿದ್ಯಾವಂತರಾದ ಮಕ್ಕಳು ಸ್ವತಃ ಕೆಸರು ಮೆತ್ತಿಸಿಕೊಳ್ಳಲು ಇಷ್ಟಪಡುವುದಿಲ್ಲ. ಈ ಸಂದರ್ಭದಲ್ಲಿ ಕೃಷಿ ಅನುಭವಸ್ಥ ಕಾರ್ಮಿಕರನ್ನು ಅವಲಂಬಿಸಬೇಕಾಗಿದೆ ಎಂದ ಅವರು, ಈಗ ಯಾಂತ್ರೀಕರಣ ಕೃಷಿ ಪದ್ಧತಿ ಬಹಳ ಒಳ್ಳೆಯ ಪರಿವರ್ತನೆ ಆಗಲಿದೆ ಎಂದು ತಿಳಿಸಿದರು.

ಯಂತ್ರಗಳನ್ನು ಬಳಸುವುದರಿಂದ ಕೃಷಿ ಕಾರ್ಮಿಕರ ಖರ್ಚು-ವೆಚ್ಚ ಕಡಿಮೆಮಾಡಿಕೊಳ್ಳಬಹುದು. ಸಮಯದ ಉಳಿತಾಯದ ಜೊತೆಗೆ ಎಕರೆವಾರು ಕೆಲಸ ಆಗುತ್ತದೆ. ಎರಡು ದಿನದಲ್ಲಿ ಮಾಡುವ ಕೆಲಸವನ್ನು ಯಂತ್ರಗಳ ಮೂಲಕ ಅರ್ಧ ದಿನದಲ್ಲಿ ಮಾಡಬಹುದು. ಜನ ಇದನ್ನು ಒಪ್ಪಿಕೊಳ್ಳುವಂತಹ ಅನಿವಾರ್ಯತೆ ಇದೆ ಎಂದರು.

ನಂತರ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್. ಹೆಚ್. ಮಂಜುನಾಥ್, ಈ ಬಾರಿ ಧರ್ಮಸ್ಥಳದಲ್ಲಿ ಸಂಪೂರ್ಣ ಯಾಂತ್ರೀಕೃತ ಭತ್ತ ಬೇಸಾಯದ ಪ್ರಾತ್ಯಕ್ಷಿಕೆಯನ್ನು ನಡೆಸಿದ್ದೇವೆ. ಸುಮಾರು 17 ಎಕರೆ ಪ್ರದೇಶದಲ್ಲಿ ಸಾಂಪ್ರಾದಾಯಿಕ ಪದ್ಧತಿಯಲ್ಲಿ 8.5 ಎಕರೆ, ಉಳಿದ 8.5 ಪ್ರದೇಶದಲ್ಲಿ ಯಾಂತ್ರೀಕೃತ ಭತ್ತ ಬೇಸಾಯ ಪ್ರಯೋಗವನ್ನು ಮಾಡಿದ್ದೇವೆ ಎಂದರು.

ಯಾಂತ್ರೀಕೃತ ಪದ್ಧತಿ ಅಳವಡಿಸಿಕೊಂಡು ನಾಟಿ ಮಾಡಿ ಕೊಯ್ಲು ಯಂತ್ರಗಳ ಮೂಲಕ ಗಂಟೆಗೆ ಒಂದು ಎಕರೆಯಷ್ಟು ಪ್ರದೇಶದ ಬೆಳೆ ಕಟಾವು ಮಾಡಬಹುದು. ಕಾರ್ಮಿಕರ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಿರುವ ಈ ಸಮಯದಲ್ಲಿ ಯಾಂತ್ರೀಕೃತ ಬೇಸಾಯ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details