ಮೂಡಬಿದ್ರೆ: ಶಿಕ್ಷಕರ ದಿನಾಚರಣೆ ದಿನ ಶಿಕ್ಷಕಿಯೋರ್ವರು ಮೃತಪಟ್ಟ ಘಟನೆ ಮೂಡಬಿದ್ರೆ ತಾಲೂಕಿನ ಅಲಂಗಾರಿನಲ್ಲಿ ಶನಿವಾರ ನಡೆದಿದೆ.
ಶಿಕ್ಷಕರ ದಿನಾಚರಣೆ ದಿನವೇ ಮೃತಪಟ್ಟ ಶಿಕ್ಷಕಿ - ಶಿಕ್ಷಕರ ದಿನಾಚರಣೆಯಂದೇ ಶಿಕ್ಷಕಿ ಸಾವು
ಶಿಕ್ಷಕರ ದಿನಾಚರಣೆ ದಿನವೇ ಅನಾರೋಗ್ಯದಿಂದ ಶಿಕ್ಷಕಿಯೋರ್ವರು ಮೃತಪಟ್ಟ ಘಟನೆ ಮೂಡಬಿದ್ರೆ ತಾಲೂಕಿನ ಅಲಂಗಾರಿನಲ್ಲಿ ನಡೆದಿದೆ.
ಶಿಕ್ಷಕಿ ಸಾವು
ಡಿ.ಜೆ.ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿ ತ್ರಿಶಾಲ ಜೈನ್ (54) ಅನಾರೋಗ್ಯದಿಂದ ನಿಧನರಾದ ಶಿಕ್ಷಕಿ. ಮೂಡುಬಿದಿರೆ ತಾಲೂಕಿನ ಡಿ.ಜೆ.ಶಾಲೆಯಲ್ಲಿ ಕಳೆದ 25 ವರ್ಷಗಳಿಂದ ಆಂಗ್ಲ ಭಾಷೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ತ್ರಿಶಾಲ ಅವರು ಇಂದು ಅನಾರೋಗ್ಯದಿಂದ ಅಲಂಗಾರಿನರುವ ಸ್ವಗೃಹದಲ್ಲಿ ಮೃತಪಟ್ಟಿದ್ದಾರೆ.
ತ್ರಿಶಾಲ ಅವರ ಪತಿ ಸುಭಾಶ್ಚಂದ್ರ ಜೈನ್ ಅವರು ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನ ನಿವೃತ್ತ ಗುಮಾಸ್ತರಾಗಿದ್ದರು. ತ್ರಿಶಾಲ ಅವರು ಪತಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.