ಕರ್ನಾಟಕ

karnataka

ETV Bharat / state

ಟಿ. ಸಿ ಬಿದ್ದು 15 ದಿನ ಕಳೆದರೂ ತೆರವು ಮಾಡದ ಕಡಬ ಮೆಸ್ಕಾಂ - Suliah of Dakshina Kannada district

ಕಡಬ ತಾಲೂಕಿನ ಮರ್ದಾಳ ಸಮೀಪದ ಕೆರ್ಮಾಯಿ - ಗುರಿಯಡ್ಕ ರಸ್ತೆಯ ಪುಯಿಲ ಎಂಬಲ್ಲಿ ಸುಮಾರು 15 ದಿನಗಳ ಹಿಂದೆ ಬೀಸಿದ ಗಾಳಿಯ ರಭಸಕ್ಕೆ ಸಿಕ್ಕಿ ವಿದ್ಯುತ್ ಪರಿವರ್ತಕ(ಟಿ. ಸಿ) ವೊಂದು ನೆಲಕ್ಕುರುಳಿದ್ದರೂ ಇನ್ನು ತೆರವು ಮಾಡಿಲ್ಲ

TC fell in Kadaba and Mescom is least bothered
ಟಿ. ಸಿ ಬಿದ್ದು 15 ದಿನ ಕಳೆದರೂ ತೆರವು ಮಾಡದ ಕಡಬ ಮೆಸ್ಕಾಂ

By

Published : May 22, 2020, 3:03 PM IST

ಸುಳ್ಯ(ದಕ್ಷಿಣ ಕನ್ನಡ):ಕಡಬ ಮೆಸ್ಕಾಂ ವ್ಯಾಪ್ತಿಯಲ್ಲಿ 15 ದಿನಗಳಿಂದ ವಿದ್ಯುತ್ ಪರಿವರ್ತಕವೊಂದು ರಸ್ತೆ ಬದಿಯಲ್ಲಿ ಬಿದ್ದಿದ್ದು, ಇನ್ನೂ ಇದನ್ನು ತೆರವು ಮಾಡಲು ಮಾತ್ರ ಮೆಸ್ಕಾಂ ಮುಂದಾಗಿಲ್ಲ.

ಕಡಬ ತಾಲೂಕಿನ ಮರ್ದಾಳ ಸಮೀಪದ ಕೆರ್ಮಾಯಿ - ಗುರಿಯಡ್ಕ ರಸ್ತೆಯ ಪುಯಿಲ ಎಂಬಲ್ಲಿ ಸುಮಾರು 15 ದಿನಗಳ ಹಿಂದೆ ಬೀಸಿದ ಗಾಳಿಯ ರಭಸಕ್ಕೆ ಸಿಕ್ಕಿ ವಿದ್ಯುತ್ ಪರಿವರ್ತಕ(ಟಿ. ಸಿ) ವೊಂದು ನೆಲಕ್ಕುರುಳಿದೆ. ಘಟನೆಯಿಂದ ವಿದ್ಯುತ್​ ಸಂಪರ್ಕ ಕಳೆದುಕೊಂಡಿದ್ದ ಈ ಭಾಗಕ್ಕೆ ಪರ್ಯಾಯ ಮಾರ್ಗದಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಬಿದ್ದಿರುವ ಟಿ. ಸಿ ಯನ್ನು ತೆರವುಗೊಳಿಸಲು ಮೆಸ್ಕಾಂ ಈ ತನಕ ಮುಂದಾಗಿಲ್ಲ.

ಮಾತ್ರವಲ್ಲದೇ ಈ ರಸ್ತೆಯಲ್ಲಿ ದಿನಂಪ್ರತಿ ಹಲವಾರು ವಾಹನಗಳು, ದನಕರುಗಳು ಸಂಚರಿಸುತ್ತಿದ್ದು, ಅನಾಹುತಗಳಿಗೆ ಕಾರಣವಾಗಲಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ABOUT THE AUTHOR

...view details