ಕಡಬ:ಮಲಂಕರ ಕ್ಯಾಥೋಲಿಕ್ ಧರ್ಮಸಭೆಯ ಪುತ್ತೂರು ಧರ್ಮಪ್ರಾಂತ್ಯದ ಅಧೀನದಲ್ಲಿರುವ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರು ಕೋವಿಡ್-19 ರಿಂದ ಮೃತಪಟ್ಟರೆ ತಮ್ಮ ಪ್ರೀತಿ ಪಾತ್ರರನ್ನು ಸಮಯೋಚಿತವಾಗಿ ಮತ್ತು ಘನತೆಯಿಂದ ಚರ್ಚ್ ಸ್ಮಶಾನಗಳಲ್ಲಿ ಅಂತ್ಯಕ್ರಿಯೆ ನಡೆಸುವ ಸಲುವಾಗಿ ಟಾಸ್ಕ್ ಫೋರ್ಸ್ ತಂಡಗಳನ್ನ ನಿಯೋಜನೆ ಮಾಡಲಾಗಿದೆ.
ಕೋವಿಡ್ ಮೃತರ ಅಂತ್ಯಸಂಸ್ಕಾರ: ಟಾಸ್ಕ್ ಫೋರ್ಸ್ ರಚನೆ - funeral of covid deceased
ಕೋವಿಡ್-19 ನಿಂದ ಮೃತಪಟ್ಟರೆ ಸ್ಮಶಾನಗಳಲ್ಲಿ ಅಂತ್ಯಕ್ರಿಯೆ ನಡೆಸುವ ಸಲುವಾಗಿ ಪುತ್ತೂರು ಧರ್ಮಪ್ರಾಂತ್ಯದ ಬಿಷಪ್ ವಂದನೀಯ ರೆ.ಡಾ. ಗೀವರ್ಗೀಸ್ ಮಾರ್ ಮಕ್ಕಾರಿಯೋಸ್ ಮಾರ್ಗದರ್ಶನದಲ್ಲಿ ಮೂವರು ಧರ್ಮಗುರುಗಳ ಮುಂದಾಳತ್ವದಲ್ಲಿ 16 ಯುವಕರ ಎರಡು ಟಾಸ್ಕ್ ಫೋರ್ಸ್ ತಂಡಗಳನ್ನ ನಿಯೋಜನೆ ಮಾಡಲಾಗಿದೆ.
![ಕೋವಿಡ್ ಮೃತರ ಅಂತ್ಯಸಂಸ್ಕಾರ: ಟಾಸ್ಕ್ ಫೋರ್ಸ್ ರಚನೆ Task Force Team Formation](https://etvbharatimages.akamaized.net/etvbharat/prod-images/768-512-8298366-999-8298366-1596592234608.jpg)
ಪುತ್ತೂರು ಧರ್ಮಪ್ರಾಂತ್ಯದ ಬಿಷಪ್ ವಂದನೀಯ ರೆ.ಡಾ.ಗೀವರ್ಗೀಸ್ ಮಾರ್ ಮಕ್ಕಾರಿಯೋಸ್ ಮಾರ್ಗದರ್ಶನದಲ್ಲಿ ಮೂವರು ಧರ್ಮಗುರುಗಳ ಮುಂದಾಳತ್ವದಲ್ಲಿ 16 ಯುವಕರು ಎರಡು ಗುಂಪುಗಳಾಗಿ ಈ ತಂಡದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಕೋವಿಡ್ -19ರ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಎಲ್ಲ ನಿರ್ದೇಶನಗಳನ್ನು ಹಾಗೂ ಪ್ರೋಟೋಕಾಲ್ ಅನುಸರಿಸಿ ಚರ್ಚ್ ಸಮಾಧಿಯಲ್ಲಿ ಆರೋಗ್ಯ ಇಲಾಖೆ ಸಹಕಾರದೊಂದಿಗೆ ಅಂತ್ಯಸಂಸ್ಕಾರವನ್ನು ಈ ತಂಡ ಮಾಡಲಿದೆ.
ಇನ್ನು ಪಿಪಿಐ ಕಿಟ್ ಧರಿಸುವಿಕೆ ಹಾಗೂ ಅಂತ್ಯಸಂಸ್ಕಾರದ ವೇಳೆಯಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಕಡಬದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಸುಚಿತ್ರಾರಾವ್ ನೇತೃತ್ವದಲ್ಲಿ ಈ ತಂಡಕ್ಕೆ ತರಬೇತಿ ನೀಡಲಾಯಿತು. ತಂಡದ ಸದಸ್ಯರು ಕೇಳಿದ ಸಂಶಯಗಳಿಗೆ ವೈದ್ಯಾಧಿಕಾರಿ ಸುಚಿತ್ರಾರಾವ್ ಉತ್ತರ ನೀಡುವ ಮೂಲಕ ಕೊರೊನಾ ಸಮಯದಲ್ಲಿ ಭಯಪಡುವ ಅಗತ್ಯ ಇಲ್ಲ, ಬದಲಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಎಂದರು.