ಕರ್ನಾಟಕ

karnataka

ETV Bharat / state

ಗುಂಡ್ಯ ಚೆಕ್​​​​ಪೋಸ್ಟ್​​​ನಲ್ಲಿ ಹೊರ ರಾಜ್ಯದ ವಾಹನಗಳಿಗೆ ನಿರ್ಬಂಧ: ಚಾಲಕರ ಆಕ್ರೋಶ - Tamil Nadu driver blocked at check post

ಯಾತ್ರಿಕರನ್ನು ಕರೆದೊಯ್ಯಲು ಬಂದಿದ್ದ ತಮಿಳುನಾಡಿನ ಚಾಲಕನಿಗೆ ಗಡಿ ಪ್ರವೇಶ ನಿರಾಕರಿಸಿದ ಅಧಿಕಾರಿಗಳು ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tamil Nadu driver blocked at check post
ಚೆಕ್​ಪೋಸ್ಟ್​​

By

Published : May 11, 2020, 2:35 PM IST

ಗುಂಡ್ಯ (ದಕ್ಷಿಣ ಕನ್ನಡ): ಮಂಗಳೂರಿನಲ್ಲಿದ್ದ ಮೂವರು ಯಾತ್ರಿಕರನ್ನು ಕರೆದುಕೊಂಡು ಹೋಗಲು ಬಂದಿದ್ದ ಕಾರು ಚಾಲಕನನ್ನು ಗುಂಡ್ಯ ಚೆಕ್​​​​​ಪೋಸ್ಟ್​​​ನಲ್ಲಿ ತಡೆದು ತಮಿಳುನಾಡಿಗೆ ವಾಪಸ್​​​ ಕಳುಹಿಸಿದ್ದಾರೆ.

ಕರ್ನಾಟಕದ ಪಾಸ್​​

ಮಂಗಳೂರಿನಲ್ಲಿ ಉಳಿದುಕೊಂಡಿದ್ದ ಯಾತ್ರಿಕರನ್ನು ಕರೆದೊಯ್ಯಲು ತಮಿಳುನಾಡಿನ ದಿಂಡಿಗಲ್​​ನಿಂದ ಬಂದಿದ್ದ. ಈತ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಗಳ ಇ-ಪಾಸ್ ಹೊಂದಿದ್ದ. ಆದರೆ, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶ ಕಲ್ಪಿಸುವ ಗುಂಡ್ಯ ಚೆಕ್​​​ಪೋಸ್ಟ್​​ನಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು ಜಿಲ್ಲೆಗೆ ಪ್ರವೇಶ ನೀಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ಮಾತ್ರವಲ್ಲದೇ, ಈ ಬಗ್ಗೆ ಸ್ಪಷ್ಟನೆ ಕೇಳಲು ಅಧಿಕಾರಿಗಳಿಗೆ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ ಎಂದು ಚಾಲಕ ಆರೋಪಿಸಿದ್ದಾರೆ. ನಿನ್ನೆ ಸಂಜೆ 5 ಗಂಟೆಯಿಂದ ಇಂದು ಬೆಳಗ್ಗೆವರೆಗೂ ಚೆಕ್​​​ಪೋಸ್ಟ್​​​ನಲ್ಲೇ ತಡೆ ಹಾಕಲಾಗಿದೆ.

ಈ ಕುರಿತು ಮಾತನಾಡಿದ ಕಾರು ಚಾಲಕ ರಾಜು, ಪಾಸ್ ನೀಡುವಾಗ ಸರಿಯಾದ ಮಾನದಂಡಗಳನ್ನು ಪಾಲಿಸುತ್ತಿಲ್ಲ. ಪಾಸ್​​ ಇದ್ದರೂ ಜಿಲ್ಲೆಗೆ ಪ್ರವೇಶ ನೀಡಿಲ್ಲ ಎಂದ ಮೇಲೆ ಇ-ಪಾಸ್ ನೀಡಿ ಏನು ಪ್ರಯೋಜನ. ಅರ್ಜಿ ಸಲ್ಲಿಸಿದಾಗ ಪಾಸ್​​​ಗಳನ್ನು ತಿರಸ್ಕರಿಸಬೇಕಿತ್ತು. ಬದಲಾಗಿ ಗಡಿ ಪ್ರವೇಶಕ್ಕೆ ಅವಕಾಶ ನೀಡದಿರುವುದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದರು.

ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಈ ಕುರಿತು ಮಾತನಾಡಿ, ಜಿಲ್ಲಾಡಳಿತದ ಆದೇಶದಂತೆ ಪಾಸ್ ಪಡೆಯಬೇಕಾಗುತ್ತದೆ. ಇಂತಹ ಪಾಸ್ ಅವರು ಪಡೆಯದ ಕಾರಣ ಈ ಗೊಂದಲ ಉಂಟಾಗಿದೆ. ಕಾರು ಚಾಲಕ ಯಾರನ್ನು ಕರೆದೊಯ್ಯಬೇಕು ಎಂದುಕೊಂಡಿದ್ದರೋ ಅವರನ್ನು ಬೇರೆ ವಾಹನದಲ್ಲಿ ಗಡಿವರೆಗೂ ಕರೆಸಿಕೊಂಡು ಆನಂತರ ಪ್ರಯಾಣ ಮುಂದುವರೆಸುವಂತೆ ಹೇಳಲಾಗಿತ್ತು ಎಂದಿದ್ದಾರೆ.

ABOUT THE AUTHOR

...view details