ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ಏಪ್ರಿಲ್ 21ರಂದು ಮಸೀದಿ ನವೀಕರಣದ ವೇಳೆ ಹಿಂದೂ ದೇಗುಲ ಶೈಲಿಯ ಕುರುಹುಗಳು ದೊರೆತಿದ್ದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಇಂದು ತಾಂಬೂಲ ಪ್ರಶ್ನಾ ಚಿಂತನೆಯನ್ನು ಆಯೋಜಿಸಿದೆ.
ಹಿಂದೂಗಳ ಧಾರ್ಮಿಕ ನಂಬುಗೆಯ ಪ್ರಕಾರ, ಪುರಾಣದ ಸತ್ಯಾನುಸತ್ಯತೆಯನ್ನು ಜ್ಯೋತಿಷ್ಯದ ಉನ್ನತ ಸ್ಥಾನದಲ್ಲಿರುವ ಅಷ್ಟಮಂಗಲದಿಂದ ತಿಳಿಯಲು ಸಾಧ್ಯವಿದೆ. ಈ ಅಷ್ಟಮಂಗಲ ಏರ್ಪಡಿಸಿ ಮಳಲಿಯ ಮಸೀದಿಯಲ್ಲಿ ಪತ್ತೆಯಾದ ದೇಗುಲ ಶೈಲಿಯ ಇತಿಹಾಸವನ್ನು ಅರಿಯಲು ಹಿಂದೂ ಸಂಘಟನೆಗಳು ನಿರ್ಧರಿಸಿವೆ. ಅಷ್ಟಮಂಗಲವನ್ನು ಯಾವಾಗ ನಡೆಸಬೇಕು, ಎಲ್ಲಿ ನಡೆಸಬೇಕು, ಯಾವ ದೈವಿಕ ಶಕ್ತಿಯಿದೆ ಎಂಬುದನ್ನು ತಿಳಿಯಲು ತಾಂಬೂಲ ಪ್ರಶ್ನಾ ಚಿಂತನೆಗೆ ನಿರ್ಧರಿಸಲಾಗಿದೆ.