ಮಂಗಳೂರು: ನಗರದ ಪಂಪ್‌ವೆಲ್ ಬಳಿಯ ಲಾಡ್ಜ್‌ನಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತಪಟ್ಟಿರುವ ವ್ಯಕ್ತಿಯನ್ನು ಅಬ್ದುಲ್ ಕರೀಂ ಸಿ ಯು ಎಂದು ಗುರುತಿಸಲಾಗಿದೆ. ಉಪ್ಪಳದಲ್ಲಿ ಇಂಟರ್‌ಲಾಕ್ ಫ್ಯಾಕ್ಟರಿ ಹೊಂದಿರುವ ಇವರು ಪಡೀಲ್‌ನಲ್ಲಿ ಸಮಕ್ ಡೈನ್ ಹೋಟೆಲ್ ನಡೆಸುತ್ತಿದ್ದರು. ಪ್ರತಿನಿತ್ಯ ಉಪ್ಪಳದಿಂದ ಮಂಗಳೂರಿಗೆ ಬರುತ್ತಿದ್ದು ನಿನ್ನೆ ಮಧ್ಯಾಹ್ನದಿಂದ ಪಂಪ್‌ವೆಲ್‌ನ ಲಾಡ್ಜ್‌ನಲ್ಲಿ ತಂಗಿದ್ದರು.
ಮಂಗಳೂರು: ಲಾಡ್ಜ್‌ನಲ್ಲಿ ಕೇರಳ ಮೂಲದ ವ್ಯಕ್ತಿ ಅನುಮಾನಾಸ್ಪದ ಸಾವು - etv bharat karnataka
ಪಂಪ್‌ವೆಲ್ ಬಳಿಯ ಲಾಡ್ಜೊಂದರಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರು ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಕೇರಳ ಮೂಲದ ವ್ಯಕ್ತಿ ಅನುಮಾನಸ್ಪದ ಸಾವು
ಇಂದು ಅವರಿದ್ದ ಕೊಠಡಿಯೊಳಗಿನಿಂದ ಮೊಬೈಲ್ ಫೋನ್ ಪದೇ ಪದೇ ರಿಂಗಣಿಸುತ್ತಿದ್ದರೂ ಕರೆ ಸ್ವೀಕರಿಸಿದೇ ಇರುವುದರಿಂದ ಅನುಮಾನಗೊಂಡ ಸಿಬ್ಬಂದಿ ಬಾಗಿಲು ಮುರಿದು ನೋಡಿದ್ದಾರೆ. ಆಗ ನಗ್ನ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿರುವ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ನಾಲ್ವರು ಮಕ್ಕಳು, ಪತ್ನಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ.. ಒಬ್ಬಳು ಬಚಾವ್!!