ಬಂಟ್ವಾಳ:ನೇತ್ರಾವತಿ ಸೇತುವೆಯ ಮೇಲೆ ಬೈಕ್ ಚಾಲನೆಯಲ್ಲಿಟ್ಟು ಬೈಕ್ ಸವಾರ ನಾಪತ್ತೆಯಾಗಿದ್ದು, ಸವಾರ ನದಿಗೆ ಹಾರಿರಬಹುದು ಎಂದು ಸಂಶಯ ವ್ಯಕ್ತವಾಗುತ್ತಿದೆ.
ಬೈಕ್ ಸೇತುವೆ ಮೇಲೆ ನಿಂತಿದ್ದು ಸವಾರ ಕಾಣದಿರುವುದರಿಂದ ಸ್ಥಳೀಯ ಈಜುಗಾರರು ಈತನಿಗೆ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಬೆಂಗಳೂರು ದಾಸರಹಳ್ಳಿ ನಿವಾಸಿ ಸತ್ಯವೇಲು (29) ನದಿಗೆ ಹಾರಿರಬಹುದು ಎಂದು ಸಂಶಯ ಪಡಲಾಗಿರುವ ಯುವಕ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ, ಈ ಮೊದಲೇ ಇಂಥ ಕೃತ್ಯ ಎಸಗಲು ಇದೇ ಜಾಗಕ್ಕೆ ಬಂದಿದ್ದಾಗ ಸ್ಥಳೀಯರು ರಕ್ಷಿಸಿದ್ದರು.