ಕರ್ನಾಟಕ

karnataka

ETV Bharat / state

ಬಾಂಬ್ ನಿಷ್ಕ್ರಿಯ ತಂಡದಿಂದ ಸ್ಫೋಟಗೊಂಡ ಬಾಂಬ್​: ನಿಟ್ಟುಸಿರು ಬಿಟ್ಟ ಜನತೆ - ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​​ ಪತ್ತೆ

suspected thing found in Manglore (Bajpe) International Airport. bag found in out of passengers rest room In the Airport. Intense checks are being carried out by the bomb squad at the airport

ಬಾಂಬ್ ಸ್ಫೋಟ
ಬಾಂಬ್ ಸ್ಫೋಟ

By

Published : Jan 20, 2020, 2:49 PM IST

Updated : Jan 20, 2020, 5:58 PM IST

17:40 January 20

ಬಾಂಬ್ ಸ್ಫೋಟ
  • ಕೆಂಜಾರು ಮೈದಾನದಲ್ಲಿ ಬಾಂಬ್ ನಿಷ್ಕ್ರಿಯ ತಂಡದಿಂದ ಬ್ಯಾಟರಿ ಬಳಸಿ ಸ್ಫೋಟಿಸಿದ ಸಿಬ್ಬಂದಿ
  • ಮೈದಾನದಲ್ಲಿ ಆವರಿಸಿದ ದಟ್ಟ ಹೊಗೆ 
  • ಬ್ಯಾಗ್​ನಲ್ಲಿ ಇರಿಸಿದ್ದ ಬಾಂಬ್​ ಸ್ಫೋಟ
  • ಕೊನೆಗೂ ನಿಟ್ಟುಸಿರು ಬಿಟ್ಟ ಜನರು, ಸಿಬ್ಬಂದಿ
  • ಮಂಗಳೂರಲ್ಲದೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಘಟನೆ 
  • ಮರಳು ಮೂಟೆಗಳ ಮಧ್ಯೆ ಇರಿಸಿದ್ದ ಬಾಂಬ್​ ಸ್ಟೋಟ 

17:25 January 20

ಈ ಆಟೋ ಮುಖಾಂತರ ಬಂದು ಬಾಂಬ್​ ಇಟ್ಟಿರುವ ಶಂಕೆ
  • ಬ್ಯಾಟರಿ ನಿಷ್ಫಲವಾದ್ದರಿಂದ ಸ್ಫೋಟ ವಿಳಂಬ ವಾದ  ಬೇರೆ ಬ್ಯಾಟರಿ ಬಳಸಿ ಸ್ಪೋಟಕ್ಕೆ ತಯಾರು ನಡೆಸುತ್ತಿರುವ ತಂಡ 
  • ಕೆಲವೇ ಕ್ಷಣದಲ್ಲಿ ಬಾಂಬ್​ ​ ಸ್ಫೋಟಿಸಲಿರುವ ಸಿಬ್ಬಂದಿ
  • ಮೈದಾನದ ಬದಿಯಲ್ಲಿ ಇದ್ದ ಜನರನ್ನು ದೂರ ಕಳುಹಿಸುತ್ತಿರುವ ಪೊಲೀಸರು 

16:41 January 20

ವಿಮಾನ ನಿಲ್ದಾಣದಲ್ಲಿ ಬ್ಯಾಗ್​ ಇಟ್ಟು ಹೋಗಿದ್ದ ವ್ಯಕ್ತಿ

ವಿಮಾನ ನಿಲ್ದಾಣದಲ್ಲಿ ಬ್ಯಾಗ್​ ಇಟ್ಟು ಹೋಗಿದ್ದ ವ್ಯಕ್ತಿ


ಆಟೋದಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅನುಮಾನಾಸ್ಪದವಾಗಿ ಬ್ಯಾಗ್​ ಇಟ್ಟು ಹೋಗಿದ್ದ ವ್ಯಕ್ತಿಯ ಚಲನ ವಲನ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. 
 

15:36 January 20

ಬಸವರಾಜ್ ಬೊಮ್ಮಾಯಿ
  • ನಮ್ಮ ಸರ್ಕಾರ ಕೇವಲ ಬಾಂಬ್ ನಿಷ್ಕ್ರಿಯ ಮಾಡುವುದಿಲ್ಲ. ಅದರ ಹಿಂದೆ ಇರುವ ಶಕ್ತಿಗಳನ್ನ ಸಹ ನಿಷ್ಕ್ರಿಯ ಮಾಡಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.  ಹಾವೇರಿ ಜಿಲ್ಲೆ ಶಿಗ್ಗಾವಿ ಸಮೀಪದ ಜಾನಪದ ವಿವಿಯಲ್ಲಿ ಮಾತನಾಡಿದ ಅವರು, ಇದರ ಉದ್ದೇಶ ಜನರನ್ನ ಭಯಭೀತಗೊಳಿಸುವುದಾಗಿದೆ ಎಂದು ತಿಳಿಸಿದರು. 
  • ಹುಬ್ಬಳ್ಳಿ: ವಿಮಾನ ನಿಲ್ದಾಣ ಅಧಿಕಾರಿಗಳೊಂದಿಗೆ ಭದ್ರತೆಯ ವಿಷಯವಾಗಿ ಚರ್ಚೆ ಮಾಡಿದ್ದು, ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಹು-ಧಾ ಪೊಲೀಸ್ ಕಮೀಷನರ್ ಆರ್. ದಿಲೀಪ್ ಮಾಹಿತಿ ನೀಡಿದರು.  
     

15:24 January 20

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಹೈಅಲರ್ಟ್

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಹೈಅಲರ್ಟ್

ದೇವನಹಳ್ಳಿ: ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾದ ಹಿನ್ನೆಲೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಹೈಅಲರ್ಟ್ ಘೋಷಿಸಿದ್ದಾರೆ. ಅನುಮಾನಸ್ಪದ ವ್ಯಕ್ತಿ ಮತ್ತು ವಸ್ತುಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.

14:49 January 20

ವಾಹನ ಸಮಸ್ಯೆ... ಅನುಮಾನಾಸ್ಪದ ಬಾಂಬ್​ ಪರಿಶೀಲನಾ ಕಾರ್ಯ ವಿಳಂಬ

ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೊರಕಿರುವ ಬಾಂಬ್ ಎನ್ನಲಾದ ವಸ್ತುವನ್ನು ನಿಷ್ಕ್ರಿಯಗೊಳಿಸಲು ಬಂದಿರುವ ವಾಹನಕ್ಕೆ ಬ್ರೇಕ್ ಇಲ್ಲದ ಕಾರಣ ಕೆಂಜಾರು ಮೈದಾನ ಭಾಗಕ್ಕೆ ಹೋಗಲು ವಿಳಂಬ ಆಗುತ್ತಿದೆ.

ಮೈದಾನ ಮಾರ್ಗಕ್ಕೆ ಹೋಗುವ ದಾರಿ ಇಂಟರ್ ಲಾಕ್ ಆಗಿದ್ದು, ಇಳಿಜಾರಿನಿಂದ ಕೂಡಿದೆ. ಆದ್ದರಿಂದ ಬ್ರೇಕ್ ಇಲ್ಲದ ವಾಹನವನ್ನು ಇಳಿಸಲು ತಡೆಯಾಗಿದೆ. ಈ ಬಗ್ಗೆ ಪೊಲೀಸರು ಪರ್ಯಾಯ ವ್ಯವಸ್ಥೆ ಮಾಡಲು ಹರಸಾಹಸ ಪಡುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್​ ವ್ಯವಸ್ಥೆ ಇದ್ದು, ಬಾಂಬ್ ನಿಷ್ಕ್ರಿಯ ದಳದ ತಂಡ ಬೆಂಗಳೂರಿನಿಂದ ಆಗಮಿಸುತ್ತಿದೆ‌. ತಂಡ ಬಂದ ತಕ್ಷಣ ಬಾಂಬ್ ನಿಷ್ಕ್ರಿಯಗೊಳಿಸಲಾಗುವುದು. ಮಂಗಳೂರು ಬಜ್ಪೆ ನಡುವೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
 

14:38 January 20

ಅನುಮಾನಾಸ್ಪದ ಬ್ಯಾಗ್​​ ಪತ್ತೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಪತ್ತೆಯಾದ ಬ್ಯಾಗ್​ವೊಂದರಲ್ಲಿ ಬಾಂಬ್​​ನಂತಹ ವಸ್ತುವೊಂದು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.

ಇಂದು ಮುಂಜಾನೆ ಪ್ರಯಾಣಿಕರು ಹೊರಭಾಗದಲ್ಲಿ ಕೂರುವ ಆಸನದಲ್ಲಿ ಬ್ಯಾಗ್ ಪತ್ತೆಯಾಗಿತ್ತು. ಅನುಮಾನಾಸ್ಪದ ಬ್ಯಾಗ್ ಪತ್ತೆಯಾದ ಬೆನ್ನಲ್ಲೇ ಸಿಎಸ್ಎಫ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದು, ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Last Updated : Jan 20, 2020, 5:58 PM IST

ABOUT THE AUTHOR

...view details