ಕರ್ನಾಟಕ

karnataka

ETV Bharat / state

ಬೀದಿಬದಿ ವ್ಯಾಪಾರಿಗಳ ಗುರುತಿಸುವಿಕೆಗೆ ಸರ್ವೇ ನಡೆಯುತ್ತಿದೆ: ಮನಪಾ ಆಯುಕ್ತ - MANAPA commissioner

ಬೀದಿಬದಿ ವ್ಯಾಪಾರಿಗಳಿಗೆ ಐಡಿ ಕಾರ್ಡ್ ನೀಡಲು ನಿರ್ಧರಿಸಿರುವ ಮಹಾನಗರ ಪಾಲಿಕೆ ನಿರ್ಧಾರ ಕುರಿತಂತೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದಿದೆ. ಈ ವೇಳೆ ವ್ಯಾಪಾರಿಗಳಿಂದಲೇ ಹಣ ಪಡೆದು ಸರ್ವೇ ನಡೆಸಿರುವುದಕ್ಕೆ ಆಕ್ಷೇಪ ಕೇಳಿಬಂದಿದೆ.

MANAPA commissioner Akshay Sridhar
ಮನಪಾ ಆಯುಕ್ತ ಅಕ್ಷಯ್ ಶ್ರೀಧರ್

By

Published : Sep 30, 2021, 8:05 PM IST

ಮಂಗಳೂರು: ಬೀದಿಬದಿ ವ್ಯಾಪಾರಿಗಳ ಗುರುತಿಸುವಿಕೆಗೆ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಸರ್ವೇ ಕಾರ್ಯ ಮಾತ್ರ ನಡೆದಿದ್ದು, ಇನ್ನೂ ಪಟ್ಟಿ ಅಂತಿಮಗೊಳಿಸಿಲ್ಲ. ಬೀದಿಬದಿ ವ್ಯಾಪಾರಿಗಳಿಂದ 50 ರೂ. ಪಡೆದು ಸಮೀಕ್ಷೆ ನಡೆಸಲಾಗುತ್ತದೆ ಎಂದು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದ್ದಾರೆ.

ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮನಪಾ ಸದಸ್ಯ ಕಿರಣ್ ಕುಮಾರ್, ಪಾಲಿಕೆ ವ್ಯಾಪ್ತಿಯಲ್ಲಿ ಟೈಗರ್ ಕಾರ್ಯಾಚರಣೆ ನಡೆಸುವ ಬದಲು ಅಧಿಕಾರಿಗಳು ಪಾಲಿಕೆ ಸದಸ್ಯರ ಗಮನಕ್ಕೆ ತರದೆ ಬೀದಿಬದಿ ವ್ಯಾಪಾರಸ್ಥರ ಸರ್ವೇ ಕಾರ್ಯ ಮಾಡಿ ಅವರಿಂದ 50 ರೂ. ತೆಗೆದುಕೊಳ್ಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಬಹಳಷ್ಟು ಸದಸ್ಯರೂ ದನಿಗೂಡಿಸಿದರು.

ಬೀದಿಬದಿ ವ್ಯಾಪಾರಿಗಳ ಗುರುತಿಸುವಿಕೆಗೆ ಸರ್ವೇ ನಡೆಯುತ್ತಿದೆ: ಮನಪಾ ಆಯುಕ್ತ ಅಕ್ಷಯ್ ಶ್ರೀಧರ್

ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತ ಅಕ್ಷಯ್ ಶ್ರೀಧರ್, ಯಾವುದೇ ವಿಚಾರವನ್ನು ಮನಪಾ ಸದಸ್ಯರ ಗಮನಕ್ಕೆ ತರದೆ ಅಧಿಕಾರಿಗಳು ಈ ರೀತಿ ನಡೆಸಿರೋದು ತಪ್ಪು. ಮುಂದಿನ‌ ದಿನಗಳಲ್ಲಿ‌ ಪಾಲಿಕೆ ಸದಸ್ಯರಿಗೆ ತಿಳಿಸಿಯೇ ಕಾರ್ಯ ನಿರ್ವಹಿಸಬೇಕೆಂದು ಎಚ್ಚರಿಕೆ ನೀಡುತ್ತೇನೆ ಎಂದರು.

ಓರ್ವನನ್ನು ಬೀದಿಬದಿ ವ್ಯಾಪಾರಿ ಎಂದು ಪರಿಗಣಿಸಬೇಕಾದಲ್ಲಿ ನೇರವಾಗಿ ಐಡಿ ಕಾರ್ಡ್ ನೀಡಲು ಸಾಧ್ಯವಿಲ್ಲ. ಅವರಿಂದ 50 ರೂಪಾಯಿ ಪಡೆದು ಸರ್ವೇ ನಡೆಸಲಾಗುತ್ತಿದೆ. ಅಲ್ಲದೆ ಅದಕ್ಕೆ ಒಂದಷ್ಟು ನಿಯಮಗಳಿವೆ. ವ್ಯಾಪಾರಿಗಳು ಫುಟ್​​​​ಪಾತ್​​ನಲ್ಲಿ, ಜನರಿಗೆ ತೊಂದರೆ ಕೊಡುವ ರೀತಿಯಲ್ಲಿ ವ್ಯಾಪಾರ ಮಾಡಬಾರದೆನ್ನುವ ಬೇರೆ ಬೇರೆ ನಿಯಮಗಳಿವೆ. ಈಗ ಅದಕ್ಕಾಗಿ ಸಮೀಕ್ಷೆ ಕಾರ್ಯ ಮಾತ್ರ ನಡೆಯುತ್ತಿದೆ ಹೊರತು, ಯಾವುದೇ ಅಂತಿಮ ನಿರ್ಧಾರವಾಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ:'ವಿದೇಶಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಲು ಸರ್ಕಾರ ಬದ್ಧ'

ABOUT THE AUTHOR

...view details