ಕರ್ನಾಟಕ

karnataka

ETV Bharat / state

ಜಲ ವಿದ್ಯುತ್ ಜನಕ..ಈ ಕೃಷಿಕ : ಟರ್ಬೈನ್ ಮೂಲಕ ಕರೆಂಟ್​ ಉತ್ಪಾದಿಸುತ್ತಿರುವ ಸುರೇಶ್ - ಟರ್ಬೈನ್

ಸಣ್ಣ ಪುಟ್ಟ ಗಾಳಿ-ಮಳೆ ಬಂದ್ರೂ ಸಾಕು, ಕರೆಂಟ್​​ ತೆಗೀತಾರೆ. ಅಲ್ಲದೆ, ದಿನದಿಂದ ದಿನಕ್ಕೆ ವಿದ್ಯುತ್​ ಬಿಲ್​ ದರ ಕೂಡ ಹೆಚ್ಚಾಗ್ತಿದೆ. ಇಷ್ಟೆಲ್ಲಾ ರಂಪಾಟ ಯಾಕ್​ಬೇಕು ಅಂತಾ ಇಲ್ಲೊಬ್ರು 17 ವರ್ಷದಿಂದ ಹರಿಯುವ ನೀರಿನಲ್ಲಿ ಟರ್ಬೈನ್ ಮೂಲಕ ಕರೆಂಟ್ ಉತ್ಪಾದಿಸುತ್ತಾರೆ.

ಸುರೇಶ್
ಸುರೇಶ್

By

Published : Oct 7, 2021, 5:04 PM IST

Updated : Oct 8, 2021, 7:09 AM IST

ಪುತ್ತೂರು(ದಕ್ಷಿಣ ಕನ್ನಡ): ತಾಲೂಕಿನ ಬಲ್ನಾಡು ಗ್ರಾಮದಲ್ಲಿ ನೈಸರ್ಗಿಕವಾಗಿ ಹರಿಯುತ್ತಿರುವ ನೀರಿಗೆ ಟರ್ಬೈನ್ ಅಳವಡಿಸಿ ವಿದ್ಯುತ್​​ ಉತ್ಪಾದಿಸಲಾಗುತ್ತಿದೆ. ಸುರೇಶ್​ ಎಂಬುವರು, ಕಳೆದ 17 ವರ್ಷಗಳಿಂದ ತಮ್ಮ ಮನೆಗೆ ಅವಶ್ಯಕತೆ ಇರುವ ವಿದ್ಯುತ್​ಅನ್ನು ತಾವೇ ಉತ್ಪಾದಿಸಿಕೊಳ್ಳುತ್ತಿದ್ದಾರೆ.

ಸುರೇಶ್ ಅವರ ತೋಟದಲ್ಲಿ ಸುಮಾರು 60 ಅಡಿ ಎತ್ತರದಲ್ಲಿರುವ ಹಳ್ಳದ ನೀರನ್ನು ಕೊಳವೆಯ ಮೂಲಕ ಟರ್ಬೈನ್​ಗೆ ಹರಿಸಿ 2 ಕೆವಿ ವಿದ್ಯುತ್​ ಉತ್ಪಾದಿಸುತ್ತಿದ್ದಾರೆ. ಸುರೇಶ್​​ ಕುಟುಂಬ ವರ್ಷದಲ್ಲಿ 9 ತಿಂಗಳು ಇದೇ ವಿದ್ಯುತ್ ಬಳಸುತ್ತಿದೆ. ಸುಮಾರು 50 ರಿಂದ 60 ಸಾವಿರ ರೂಪಾಯಿ ಖರ್ಚು ಮಾಡಿ ಅಳವಡಿಸಲಾಗಿರುವ ಈ ಟರ್ಬೈನ್​ಗೆ ಖರ್ಚು ಮಾಡಿದ ಹಣಕ್ಕಿಂತ ಎಷ್ಟೋ ಪಾಲು ಹಣವನ್ನು ವಿದ್ಯುತ್ ಬಿಲ್ ನಲ್ಲೇ ಉಳಿಸಿಕೊಂಡಿದ್ದಾರೆ. ಇತರರಿಗೂ ಅವಕಾಶವಿದ್ದಲ್ಲಿ ಈ ರೀತಿಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು ಅಂತಾರೆ ಸುರೇಶ್.

ಜಲ ವಿದ್ಯುತ್ ಜನಕ..ಈ ಕೃಷಿಕ : ಟರ್ಬೈನ್ ಮೂಲಕ ಕರೆಂಟ್​ ಉತ್ಪಾದಿಸುತ್ತಿರುವ ಸುರೇಶ್

ಪ್ರಗತಿಪರ ಕೃಷಿಕರಾಗಿರುವ ಸುರೇಶ್, ನೈಸರ್ಗಿಕವಾಗಿ ಹರಿಯುವ ನೀರನ್ನು ತಮ್ಮ ತೋಟಕ್ಕೆ ಬಳಸಿಕೊಳ್ಳುವ ಮೂಲಕ ಅಂತರ್ಜಲ ವೃದ್ಧಿಯನ್ನೂ ಮಾಡ್ತಿದ್ದಾರೆ. ಈ ಕಿರು ಜಲವಿದ್ಯುತ್ ಘಟಕವನ್ನು ವೀಕ್ಷಿಸಲು ಹಾಗೂ ಮಾಹಿತಿ ಪಡೆದುಕೊಳ್ಳಲು ರಾಜ್ಯದ ನಾನಾ ಭಾಗಗಳ ಜನರು ತೋಟಕ್ಕೆ ಭೇಟಿ ನೀಡುತ್ತಿದ್ದಾರೆ.

ಇರುವ ಸಂಪನ್ಮೂಲಗಳನ್ನೇ ಬಳಸಿ ವಿದ್ಯುತ್ ತಯಾರಿಸುತ್ತಿರುವ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ, ಜತೆಗೆ ಇತರರಿಗೂ ಸ್ಫೂರ್ತಿ.

Last Updated : Oct 8, 2021, 7:09 AM IST

ABOUT THE AUTHOR

...view details