ಕರ್ನಾಟಕ

karnataka

ETV Bharat / state

ಬಹು ದಿನಗಳ ಹೋರಾಟದ ಬಳಿಕ ಸುರತ್ಕಲ್ ಟೋಲ್ ಗೇಟ್ ರದ್ದು: ನಳಿನ್ ಕುಮಾರ್ ಕಟೀಲ್ ಟ್ವೀಟ್ - Surathkal toll gate Controversy

ಸುರತ್ಕಲ್ ಟೋಲ್​​ಗೇಟ್ ತೆರವು ಕಾರ್ಯಕ್ಕೆ ಕೇಂದ್ರ ಸರ್ಕಾರ ಅಧಿಸೂಚನೆ ನೀಡಿದ್ದು, ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.

Suratkal toll gate cancelled
Suratkal toll gate cancelled

By

Published : Nov 14, 2022, 5:04 PM IST

Updated : Nov 14, 2022, 6:52 PM IST

ಮಂಗಳೂರು:ಮಂಗಳೂರಿನ ಸುರತ್ಕಲ್​​ನ ಟೋಲ್​​ಗೇಟ್ ರದ್ದು ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಸುರತ್ಕಲ್ ಎನ್​ಐಟಿಕೆ ಟೋಲ್​​ಗೇಟ್ ರದ್ದುಪಡಿಸುವಂತೆ ಟೋಲ್​​ಗೇಟ್ ವಿರೋಧಿ ಹೋರಾಟ ಸಮಿತಿ ಅಕ್ಟೋಬರ್ 28 ರಿಂದ ಅನಿರ್ಧಿಷ್ಠಾವಧಿ ಹಗಲು ರಾತ್ರಿ ಧರಣಿ ನಡೆಸುತ್ತಿದೆ.

ಸುರತ್ಕಲ್ ಟೋಲ್​​ಗೇಟ್ ತೆರವು

ಇದಕ್ಕೂ ಮೊದಲು ಸುರತ್ಕಲ್ ಎನ್​ಐಟಿಕೆಗೆ ಹೋರಾಟಗಾರರು ಮುತ್ತಿಗೆ ಹಾಕಿ ಟೋಲ್ ಸಂಗ್ರಹವನ್ನು ಕೆಲಹೊತ್ತು ತಡೆದು ತಮ್ಮ ಆಕ್ರೋಶ ಹೊರಹಾಕಿದ್ದರು.‌ ಇದೀಗ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದು, ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದೆ. ನಮ್ಮ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು. ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೆ ಕೇಂದ್ರ ಸಚಿವರು ನೀಡಿದ್ದರು. ಅದರಂತೆ ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ ಎಂದು ಬರೆದಿದ್ದಾರೆ.

ಬೈಕ್ ರ‍್ಯಾಲಿಗೆ ತಡೆ:ಸುರತ್ಕಲ್ ಟೋಲ್​​ಗೇಟ್ ತೆರವು ಮಾಡಲು ಆಗ್ರಹಿಸಿ ಟೋಲ್​​ಗೇಟ್ ವಿರೋಧಿ ಹೋರಾಟ ಸಮಿತಿ ನಡೆಸುತ್ತಿರುವ ಹಗಲು ರಾತ್ರಿ ಧರಣಿ ಇಂದಿಗೆ 17 ದಿನ ಪೂರೈಸಿದೆ. ಇಂದಿನ ಧರಣಿಯಲ್ಲಿ ಮಾಜಿ ಸಂಸದ, ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ತಪಸ್ ಸೇನ್ ಭಾಗವಹಿಸಿದ್ದರು. ಇದರ ನಡುವೆ ಹೋರಾಟ ಬೆಂಬಲಿಸಿ ಇಂದು ಡಿವೈಎಫ್​ಐ ನಡೆಸಲುದ್ದೇಶಿಸಿದ ಬೈಕ್ ರ‍್ಯಾಲಿಯನ್ನು ತಡೆದ ಪೊಲೀಸರು ಡಿವೈಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:224 ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸುವವನು ನಿಜವಾದ ನಾಯಕ: ಸಿದ್ದರಾಮಯ್ಯ

Last Updated : Nov 14, 2022, 6:52 PM IST

ABOUT THE AUTHOR

...view details