ಕರ್ನಾಟಕ

karnataka

ETV Bharat / state

ಸುರತ್ಕಕಲ್​ನಲ್ಲಿ ದುಷ್ಕರ್ಮಿಗಳಿಂದ ಚಾಕು ಇರಿತ.. ವ್ಯಕ್ತಿ ಸ್ಥಿತಿ ಗಂಭೀರ

ಮಂಗಳೂರಿನ ಸುರತ್ಕಲ್​ನಲ್ಲಿ ದುಷ್ಕರ್ಮಿಗಳ ಅಟ್ಟಹಾಸ- ವ್ಯಕ್ತಿ ಚಾಕು ಇರಿದು ಕಿರಾತಕರು ಪರಾರಿ- ಪ್ರಕರಣ ದಾಖಲು

suratkal-man-seriously-injured-after-being-stabbed-by-miscreants
ಸುರತ್ಕಲ್​: ದುಷ್ಕರ್ಮಿಗಳಿಂದ ಚಾಕು ಇರಿತ, ವ್ಯಕ್ತಿ ಸ್ಥಿತಿ ಗಂಭೀರ

By

Published : Dec 24, 2022, 10:39 PM IST

ಮಂಗಳೂರು: ಸುರತ್ಕಲ್​ನಲ್ಲಿ ದುಷ್ಕರ್ಮಿಗಳಿಬ್ಬರು ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ನಡೆದಿದೆ. ಕೃಷ್ಣಾಪುರ ನಿವಾಸಿ ಜಲೀಲ್ ಇರಿತಕ್ಕೊಳಗಾದವರು.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ 4ನೇ ಬ್ಲಾಕ್ ನೈತಂಗಡಿ ಎಂಬಲ್ಲಿ ಈ ಘಟನೆ ನಡೆದಿದೆ.

ಸುರತ್ಕಲ್ ನೈತಂಗಡಿಯಲ್ಲಿ ಜಲೀಲ್ ಅವರು ದಿನಸಿ ಅಂಗಡಿ ಹೊಂದಿದ್ದರು. ಅವರು ಅಂಗಡಿಯಲ್ಲಿದ್ದ ವೇಳೆ ಎದೆಯ ಭಾಗಕ್ಕೆ ಚೂರಿಯಿಂದ ಇರಿದು ಕಿರಾತಕರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿದ್ದು, ಜಲೀಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಿತಿ ಬಹಳ ಗಂಭೀರವಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ಮೂಲಕ ತಿಳಿದು ಬಂದಿದೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಇನ್ಸ್ಟಾಗ್ರಾಮ್​ನಲ್ಲಿ ಲವ್, ಮುತ್ತಿನಗರಿಯಲ್ಲಿ ಮದುವೆ.. ಮೊಹಬತ್ ಕೊಪ್ಪಳ ಟು ಹೈದರಾಬಾದ್..!

ABOUT THE AUTHOR

...view details