ಕರ್ನಾಟಕ

karnataka

ETV Bharat / state

ಸುರತ್ಕಲ್ ಟೋಲ್​​​​ಗೇಟ್ ತಾತ್ಕಾಲಿಕ ಅಲ್ಲ, ಮುಚ್ಚಲು ಕಾನೂನಾತ್ಮಕ ಸಮಸ್ಯೆ ಇದೆ: ನಳಿನ್ - ಸುರತ್ಕಲ್ ಟೋಲ್ ಗೇಟ್ ಸಮಸ್ಯೆ

ಸುರತ್ಕಲ್ ಬಳಿಯ ಎನ್​ಐಟಿಕೆ ಟೋಲ್ ಗೇಟ್ ತಾತ್ಕಾಲಿಕವಾಗಿ ಮಾಡಿರುವ ಟೋಲ್ ಗೇಟ್ ಅಲ್ಲ. ಅದನ್ನು ಮುಚ್ಚಲು ಕಾನೂನಾತ್ಮಕ ಸಮಸ್ಯೆ ಇದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

surathkal-toll-gate-is-not-temporary-nalin-kumar-kateel
ಸುರತ್ಕಲ್ ಟೋಲ್ ಗೇಟ್ ತಾತ್ಕಾಲಿಕ ಅಲ್ಲ, ಮುಚ್ಚಲು ಕಾನೂನಾತ್ಮಕ ಸಮಸ್ಯೆ ಇದೆ: ನಳಿನ್

By

Published : Feb 26, 2022, 10:11 PM IST

ಮಂಗಳೂರು:ಸುರತ್ಕಲ್ ಬಳಿಯ ಎನ್​ಐಟಿಕೆ ಟೋಲ್​​​ಗೇಟ್ ತಾತ್ಕಾಲಿಕವಾಗಿ ಮಾಡಿರುವ ಟೋಲ್​​ಗೇಟ್ ಅಲ್ಲ. ಅದನ್ನು ಮುಚ್ಚಲು ಕಾನೂನಾತ್ಮಕ ಸಮಸ್ಯೆ ಇದೆ. ಅದನ್ನು ಬಗೆಹರಿಸಲು ಪ್ರಯತ್ನ ನಡೆಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಟೋಲ್ ಗೇಟ್ ಮುಚ್ಚಲು ಇರುವ ಕಾನೂನಾತ್ಮಕ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು. ನಾನು ಈ ಬಗ್ಗೆ ಪ್ರಸ್ತಾವನೆ ಕಳುಹಿಸಿದ್ದು, 3 ಬಾರಿ ಸಭೆ ಕೂಡ ನಡೆಸಿದ್ದೇನೆ ಎಂದರು.

ಇದನ್ನೂ ಓದಿ:ಉಕ್ರೇನ್​​ನಿಂದ ತಾಯ್ನಾಡಿಗೆ ಬಂದ ಖುಷಿ.. ಕೇಂದ್ರ ಸರ್ಕಾರವನ್ನ ಹಾಡಿ ಹೊಗಳಿದ ವಿದ್ಯಾರ್ಥಿಗಳು!

ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಮತ್ತು ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ ಮತ್ತು ಹೊಸ ಕಾಮಗಾರಿಗೆ ಶಿಲಾನ್ಯಾಸವನ್ನು ಫೆ.28ರಂದು ಕೇಂದ್ರ ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರು ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ABOUT THE AUTHOR

...view details