ಕರ್ನಾಟಕ

karnataka

ETV Bharat / state

ಸುರತ್ಕಲ್ ಬಳಿ ಸಮುದ್ರತೀರದಲ್ಲಿ ತೈಲ ಜಿಡ್ಡು ಪತ್ತೆ.. ತ್ಯಾಜ್ಯದ ಮಾದರಿ ತಪಾಸಣೆಗೆ ರವಾನೆ - ದೊಡ್ಡಕೊಪ್ಪಲು ಸಮುದ್ರ ತೀರದಲ್ಲಿ ತೈಲ ಜಿಡ್ಡು ಪತ್ತೆ

ಸುರತ್ಕಲ್‌ನ ದೊಡ್ಡಕೊಪ್ಪಲು ಸಮುದ್ರ ತೀರದಲ್ಲಿ ಕಂಡುಬಂದ ತೈಲ ಜಿಡ್ಡಿನ ಮಾದರಿ ಸಂಗ್ರಹಿಸಿ, ತಪಾಸಣೆಗಾಗಿ ಸಿಎಂಎಫ್ಆರ್​ಐಗೆ‌ ಕಳುಹಿಸಲಾಗಿದೆ.

surathkal-beach-oil-spill-sample-sent-for-testing
ಸುರತ್ಕಲ್ ಬಳಿ ಸಮುದ್ರತೀರದಲ್ಲಿ ತೈಲ ಜಿಡ್ಡು ಪತ್ತೆ.. ತ್ಯಾಜ್ಯದ ಮಾದರಿ ತಪಾಸಣೆಗೆ ರವಾನೆ

By

Published : May 14, 2022, 5:34 PM IST

ಮಂಗಳೂರು :ಸುರತ್ಕಲ್‌ನ ದೊಡ್ಡಕೊಪ್ಪಲು ಸಮುದ್ರ ತೀರದಲ್ಲಿ ಕಂಡು ಬಂದ ತೈಲ ಜಿಡ್ಡಿನ ಬಗ್ಗೆ ತನಿಖೆ ಆರಂಭವಾಗಿದೆ. ಕಡಲತೀರದಲ್ಲಿ ತೈಲ ಜಿಡ್ಡು ಪತ್ತೆಯಾದ ಬಳಿಕ ಡಿಡಿಎಂಎ, ಎಂಆರ್​​ಪಿಎಲ್, ಎಂಇಝಡ್​ ಅಧಿಕಾರಿಗಳು ಸ್ಥಳಕ್ಕೆ‌ ಭೇಟಿ‌ ನೀಡಿ, ನೀರಿನ ಮಾದರಿ ಸಂಗ್ರಹಿಸಿ, ತಪಾಸಣೆಗಾಗಿ ಸಿಎಂಎಫ್ಆರ್​ಐಗೆ‌ ಕಳುಹಿಸಿದ್ದಾರೆ.

ಸಮುದ್ರ ತೀರದಲ್ಲಿ ಪತ್ತೆಯಾದ ತ್ಯಾಜ್ಯದ ಪ್ರಾಥಮಿಕ ತನಿಖೆ‌ ನಡೆಸಿದ್ದು, ಅದು ಪಾಚಿಯಂತೆ ಕಂಡು ಬರುತ್ತಿದೆ. ಸಾಮಾನ್ಯವಾಗಿ ಮಳೆಗಾಲ ಆರಂಭಕ್ಕಿಂತಲೂ ಮುಂಚೆ ಕಡಲ ತೀರದಲ್ಲಿ ಕಂಡು ಬರುವ ಪಾಚಿಯಂತೆ ಗೋಚರಿಸುತ್ತಿದೆ. ಹೆಚ್ಚಿನ ಗಾಳಿ ಮತ್ತು ಅಲೆಗಳ ಘರ್ಷಣೆಯಿಂದ ಕಡಲಿನ ತಳಭಾಗದಲ್ಲಿರುವ ಕೆಸರು ಮೇಲಕ್ಕೆ ಬರುವುದರಿಂದ ಈ ರೀತಿ ಕಾಣಿಸಿಕೊಳ್ಳುತ್ತದೆ. ಆದರೂ ತೈಲ ಮತ್ತು ಗ್ರೀಸ್ ಪರೀಕ್ಷೆಗಾಗಿ ಇದರ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದೆ. ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅವರು ಮಾಹಿತಿ ನೀಡಿದ್ದಾರೆ.

ತ್ಯಾಜ್ಯದ ಮಾದರಿ ತಪಾಸಣೆಗೆ ರವಾನೆ

ಸುರತ್ಕಲ್​ನ ದೊಡ್ಡಕೊಪ್ಪಲು ಕಡಲ ತೀರದಲ್ಲಿ ಅಲೆಗಳೊಂದಿಗೆ ಭಾರಿ ಪ್ರಮಾಣದಲ್ಲಿ ತೈಲ ಜಿಡ್ಡು ಕಂಡು ಬರುತ್ತಿರುವುದು ಶುಕ್ರವಾರ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಸುರತ್ಕಲ್ ದೊಡ್ಡಕೊಪ್ಪಲು ಬೀಚ್​ನಲ್ಲಿ ತೈಲ ಜಿಡ್ಡು ಪತ್ತೆ

ABOUT THE AUTHOR

...view details