ಮಂಗಳೂರು :ಸೂರಿಂಜೆ ಗ್ರಾಮದ ಪೊನ್ನಗಿರಿ ನಿವಾಸಿ ವಾಮನ ದೇವಾಡಿಗ (52) ಅವರು ಇತ್ತೀಚೆಗೆ ಕ್ಯಾನ್ಸರ್ನಿಂದ ಮೃತಪಟ್ಟಿದ್ದರು. ಮರದ ಕೆಲಸಗಾರನಾಗಿ ಕಟ್ಟಿಗೆ ಕತ್ತರಿಸುವ ಕೆಲಸ ನಿರ್ವಹಿಸುತ್ತಿದ್ದ ಅವರು ಮನೆಯಲ್ಲಿ, ಚಿಕ್ಕ ವಯಸ್ಸಿನ ಇಬ್ಬರು ಮಕ್ಕಳು ಹಾಗೂ ಸಹೋದರಿ ಇದ್ದಾರೆ.
ಸಹೋದರಿ ಅವರ ಗಂಡ ತೀರಿ ಹೋಗಿರುವ ಕಾರಣ ಎರಡು ಹೆಣ್ಣು ಮಕ್ಕಳನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಇವರ ಮೇಲಿತ್ತು. ಪಾಶ್ವವಾಯು ಪೀಡಿತ ತಾಯಿ ಹಾಗೂ ನೆಲೆಸಲು ಸರಿಯಾದ ಸೂರು ಇಲ್ಲದೇ ಅರ್ಧಂಬರ್ಧ ತಯಾರಾಗಿರುವ ಮನೆಯಲ್ಲಿ ವಾಸಿಸುತ್ತಿದ್ದ ಅವರು, ಇತ್ತೀಚಿಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ಆರ್ಥಿಕ ನೆರವು ಕೋರಿ ಶಿವಾಯ ಸಂಸ್ಥೆಗೆ ಮನವಿ ಕಳುಹಿಸಿದ್ದರು.