ಕರ್ನಾಟಕ

karnataka

ETV Bharat / state

ಅಮೆರಿಕಾದ ನೆಲದಲ್ಲಿ ಪ್ರಧಾನಿ ಮೋದಿಯವರ ಆತಿಥ್ಯದ ತಂಡದಲ್ಲಿ ತುಳುನಾಡಿನ ಕುವರಿ

2017ರಲ್ಲಿ ಮೋದಿಯವರು ಅಮೆರಿಕಾ ಭೇಟಿ ಮಾಡಿದ ಸಂದರ್ಭದಲ್ಲಿ ಆತಿಥ್ಯ ನೀಡಿರುವ ತಂಡದಲ್ಲಿ ಸುಮಲ್ ಕೋಟ್ಯಾನ್ ಇದ್ದರು. ಗೋಪಾಲ ಪೂಜಾರಿ ಹಾಗೂ ಸುಫಲಾ ಎಂಬುವರ ಪುತ್ರಿಯಾಗಿ ನಗರದ ಮೇರಿಹಿಲ್‌ನಲ್ಲಿ ಜನಿಸಿರುವ ಸುಮಲ್ ಕೋಟ್ಯಾನ್, ಮಂಗಳೂರಿನ ಅನಾಸ್‌ನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಕಾರ್ಮೆಲ್ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರೈಸಿದ್ದಾರೆ.

sumana-sandeep-kotyan with prime minister modhi
ಪ್ರಧಾನಿ ಮೋದಿ ಜೊತೆ ಸುಮಲ್ ಸಂದೀಪ್ ಕೋಟ್ಯಾನ್

By

Published : Sep 29, 2021, 5:20 PM IST

ಮಂಗಳೂರು: ಪ್ರಧಾನಿ ಮೋದಿಯವರು ಇತ್ತೀಚೆಗೆ ಮೂರು ದಿನಗಳ ಅಮೆರಿಕಾ ಪ್ರವಾಸ ಕೈಗೊಂಡಿದ್ದ ಸಂದರ್ಭ ಹೋಟೆಲ್​ನಲ್ಲಿ ಆತಿಥ್ಯ ನೀಡಿದ ತಂಡದ ನೇತೃತ್ವವನ್ನು ಮಂಗಳೂರಿನ ಯುವತಿ ಸುಮಲ್ ಸಂದೀಪ್ ಕೋಟ್ಯಾನ್ ವಹಿಸಿಕೊಂಡಿದ್ದರು.

ಸುಮಲ್ ಸಂದೀಪ್ ಕೋಟ್ಯಾನ್ ತಂದೆ-ತಾಯಿ ಅಭಿಪ್ರಾಯ

ಅಮೆರಿಕಾದಲ್ಲಿ ಪ್ರಧಾನಿ ಮೋದಿ ಹಾಗೂ ಭಾರತದ ಗಣ್ಯ ವ್ಯಕ್ತಿಗಳ ಆತಿಥ್ಯದ ಜವಾಬ್ದಾರಿಯನ್ನು ಕರಾವಳಿ ಮೂಲದ ಆನಂದ ಪೂಜಾರಿಯವರ ಜುವೆಲ್ಸ್ ಆಫ್ ಇಂಡಿಯಾ ವುಡ್​ಲ್ಯಾಂಡ್ಸ್ ಡಿಸಿ ಹೋಟೆಲ್​ಗೆ ವಹಿಸಲಾಗಿತ್ತು. ಹೀಗಾಗಿ, ಸುಮಲ್ ಕೋಟ್ಯಾನ್ ಅವರು ಆತಿಥ್ಯ ನೀಡುವ ತಂಡದಲ್ಲಿದ್ದರು.

ಮೋದಿ‌ ಆತಿಥ್ಯದ ತಂಡದಲ್ಲಿ 8 ಮಂದಿ ಇದ್ದರು. ದಕ್ಷಿಣ ಭಾರತದ ಇಡ್ಲಿ, ಸಾಂಬಾರ್ ತಿಂದು ಮೋದಿ ಸಂತೋಷಪಟ್ಟರು. ಪ್ರಧಾನಿ 'ಮಗಳೇ' ಎಂದು‌ ಸಂಬೋಧಿಸಿ ಮಾತನಾಡುತ್ತಿರುವುದು ಸಂತೋಷ ತಂದಿದೆ. ಪ್ರಧಾನಿಯವರ ಸರಳತೆ, ಸಹೃದಯತೆ ಕಂಡು ನಿಜಕ್ಕೂ ಖುಷಿಯಾಗಿದೆ ಎಂದು ಸುಮಲ್ ಕೋಟ್ಯಾನ್ ತಮ್ಮ ಕುಟುಂಬಸ್ಥರಲ್ಲಿ ಸಂತಸ ಹಂಚಿಕೊಂಡಿದ್ದಾರಂತೆ.

ಪ್ರಧಾನಿ ಆಶೀರ್ವಾದ ಪಡೆದ ಸುಮಲ್ ಕೋಟ್ಯಾನ್

2017ರಲ್ಲಿ ಮೋದಿಯವರು ಅಮೆರಿಕಾ ಭೇಟಿ ಮಾಡಿದ ಸಂದರ್ಭದಲ್ಲಿ ಆತಿಥ್ಯ ನೀಡಿರುವ ತಂಡದಲ್ಲಿ ಸುಮಲ್ ಕೋಟ್ಯಾನ್ ಇದ್ದರು. ಗೋಪಾಲ ಪೂಜಾರಿ ಹಾಗೂ ಸುಫಲಾ ಎಂಬುವರ ಪುತ್ರಿಯಾಗಿ ನಗರದ ಮೇರಿಹಿಲ್‌ನಲ್ಲಿ ಜನಿಸಿರುವ ಸುಮಲ್ ಅವರು, ಮಂಗಳೂರಿನ ಅನಾಸ್‌ನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಕಾರ್ಮೆಲ್ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರೈಸಿದ್ದಾರೆ. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಮತ್ತು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.


ಸಂದೀಪ್ ಕೋಟ್ಯಾನ್ ಅವರನ್ನು ವಿವಾಹವಾಗಿರುವ ಸುಮಲ್ ಕೋಟ್ಯಾನ್ 9 ವರ್ಷಗಳಿಂದ ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ವಾಸವಾಗಿದ್ದಾರೆ. ಹೋಟೆಲ್​ ಉದ್ಯಮದಲ್ಲಿ ಆಸಕ್ತರಾಗಿರುವ ಸುಮಲ್ ಕೋಟ್ಯಾನ್ ವಾರಾಂತ್ಯದ ದಿನಗಳಲ್ಲಿ ಕರಾವಳಿ ಮೂಲದ ಆನಂದ ಪೂಜಾರಿಯವರ ಜುವೆಲ್ಸ್ ಆಫ್ ಇಂಡಿಯಾ ವುಡ್ ಲ್ಯಾಂಡ್ಸ್ ಡಿಸಿ ಹೋಟೆಲ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸುಮಲ್ ಕೋಟ್ಯಾನ್ ಅವರಿಗೆ ಮೋದಿಯವರ‌ ಆತಿಥ್ಯದ ಅವಕಾಶ ದೊರಕಿದೆ. ಆನಂದ್ ರೆಸ್ಟೋರೆಂಟ್ ಮೋದಿಯವರು ನಾಲ್ಕು‌ ಬಾರಿ ಅಮೆರಿಕಾ ಪ್ರವಾಸ ಮಾಡಿದ ಸಂದರ್ಭದಲ್ಲಿಯೂ ಆತಿಥ್ಯವನ್ನು ನೀಡಿದೆ.

ಇದನ್ನೂ ಓದಿ:ಕೋವಿಡ್​​​ನಿಂದ ಚೇತರಿಕೆ ಬಳಿಕ ಹೃದಯ ಸಮಸ್ಯೆ ಹೆಚ್ಚಾಗುತ್ತಾ?: ತಜ್ಞರು ಹೇಳುವುದೇನು?

ABOUT THE AUTHOR

...view details