ಕರ್ನಾಟಕ

karnataka

ETV Bharat / state

ನಿನ್ನೆ ನಿಧನರಾದ ಸುಳ್ಯ ಖಜಾನಾಧಿಕಾರಿ ಕೊರೊನಾ ವರದಿ ಪಾಸಿಟಿವ್ - Sulya Treasurer corona report positive

ನಿನ್ನೆ ನಿಧನರಾದ ಸುಳ್ಯದ ಖಜಾನಾಧಿಕಾರಿಯವರ ಕೋವಿಡ್ ವರದಿಯು ಪಾಸಿಟಿವ್ ಆಗಿದೆ ಎಂದು ತಿಳಿದುಬಂದಿದೆ. ಕೊರೊನಾ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಸುಳ್ಯದ ಖಜಾನೆ ಶಾಖೆಗೆ ಸ್ಯಾನಿಟೈಸ್ ಮಾಡುವ ಸಲುವಾಗಿ ನಿರ್ಬಂಧಿಸಲಾಗಿದೆ.

By

Published : Oct 20, 2020, 4:02 PM IST

ಸುಳ್ಯ:ನಿನ್ನೆ ನಿಧನರಾದ ಸುಳ್ಯದ ಖಜಾನಾಧಿಕಾರಿಯವರ ಕೋವಿಡ್ ವರದಿಯು ಪಾಸಿಟಿವ್ ಆಗಿದೆ ಎಂದು ತಿಳಿದುಬಂದಿದೆ. ಈ ಕಾರಣದಿಂದಾಗಿ ಸುಳ್ಯದಲ್ಲಿ ಇವರ ಮೃತದೇಹದ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿಲ್ಲ.

ಸುಳ್ಯದಲ್ಲಿ ಖಜಾನಾಧಿಕಾರಿ ನಿನ್ನೆ ಪುತ್ತೂರಿನಲ್ಲಿ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದರು. ಇಂದು ಅವರ ಕೊರೊನಾ ವರದಿ ಪಾಸಿಟಿವ್ ಬಂದಿದೆ.

ಕೊರೊನಾ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಸುಳ್ಯದ ಖಜಾನೆ ಶಾಖೆಗೆ ಸ್ಯಾನಿಟೈಸ್ ಮಾಡುವ ಸಲುವಾಗಿ ನಿರ್ಬಂಧಿಸಲಾಗಿದೆ. ಮುಂದಿನ ಆದೇಶದವರೆಗೆ ಬಿಲ್ ಇನ್ನಿತರ ಕೆಲಸಗಳು ನಡೆಸಲಾಗುವುದಿಲ್ಲ ಎಂದು ಹೇಳಲಾಗಿದೆ.

ABOUT THE AUTHOR

...view details