ಕರ್ನಾಟಕ

karnataka

ETV Bharat / state

ಅವನತಿ ಕಡೆಗೆ ಸಾಗುತ್ತಿದೆಯೇ, ಕೆಚ್ಚೆದೆಯ ವೀರರ ಈ ರಣಭೂಮಿ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಎಂಬ ಪುಟ್ಟ ಊರು ಸ್ವಾತಂತ್ರ್ಯ ಹೋರಾಟಗಾರರ ಕೆಚ್ಚೆದೆ ಸಾಹಸಕ್ಕೆ ಸಾಕ್ಷಿಯಾಗಿದೆ. ಇಕ್ಕೇರಿ ಅರಸರು ಕಟ್ಟಿಸಿದ ಕೋಟೆ ಮತ್ತು ಅದರ ಸುತ್ತಲಿನ ಕಂದಕಗಳ ಕುರುಹುಗಳು ಇಂದಿಗೂ ಇಲ್ಲಿದ್ದು, ಅವೆಲ್ಲ ಈಗ ಅವನತಿಯ ಹಾದಿಯತ್ತ ಸಾಗಿವೆ ಎಂಬ ಮಾತುಗಳು ಈ ಭಾಗದಲ್ಲಿ ಕೇಳಿಬರುತ್ತಿವೆ.

Sulya taluk Bellary village
ಬ್ರಿಟಿಷರ ಖಜಾನೆ ಕಚೇರಿ

By

Published : Aug 15, 2021, 10:41 AM IST

ಸುಳ್ಯ: 1857 ರಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿ ನೇತೃತ್ವದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಆದರೆ ಅದಕ್ಕೂ ಮೊದಲು ಬ್ರಿಟಿಷರ ದಬ್ಬಾಳಿಕೆಯನ್ನು ಪ್ರಶ್ನಿಸಿದ ಐತಿಹಾಸಿಕ ಊರೊಂದು ಸುಳ್ಯ ತಾಲೂಕಿನಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಎಂಬ ಪುಟ್ಟ ಊರು ಸ್ವಾತಂತ್ರ್ಯ ಹೋರಾಟಗಾರರ ಕೆಚ್ಚೆದೆಯ ಸಾಹಸಕ್ಕೆ ಸಾಕ್ಷಿಯಾಗಿದೆ. ಇಕ್ಕೇರಿ ಅರಸರು ಕಟ್ಟಿಸಿದ ಕೋಟೆ ಮತ್ತು ಅದರ ಸುತ್ತಲಿನ ಕಂದಕಗಳ ಕುರುಹುಗಳು ಇಂದಿಗೂ ಇಲ್ಲಿವೆ. 1837 ರಲ್ಲಿ ಬೆಳ್ಳಾರೆಯು ಸುಳ್ಯ, ಅಮರ ಪಂಜ ಮತ್ತು ಮಾಗಣೆ ಪ್ರದೇಶಗಳ ರಾಜಧಾನಿಯಾಗಿತ್ತು. ಇಲ್ಲಿ 1804 ರಲ್ಲಿ ಬ್ರಿಟಿಷರ ಖಜಾನೆ ಕಚೇರಿ ಆರಂಭಿಸಲಾಗಿತ್ತು. ಆ ಕಟ್ಟಡ ಇಗಲೂ ಇದ್ದು, 2015ರ ವರೆಗೂ ಈ ಕಟ್ಟಡ ಬೆಳ್ಳಾರೆ ಗ್ರಾ.ಪಂ ನ ಲೆಕ್ಕಾಧಿಕಾರಿಗಳ ಕಚೇರಿಯಾಗಿತ್ತು.

ಬ್ರಿಟಿಷರ ಖಜಾನೆ ಕಚೇರಿ

ಸ್ವಾತಂತ್ರ್ಯ ಹೋರಾಟಗಾರರು ಈ ಖಜಾನೆ ಕಟ್ಟಡವನ್ನು ಬ್ರಿಟಿಷರಿಂದ ವಶಪಡಿಸಿಕೊಂಡಿದ್ದರು. ಬೆಳ್ಳಾರೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣಕ್ಕೆ ಸೇರಿಕೊಂಡು ಬೆಳ್ಳಾರೆಯ ಕೋಟೆ ಇದೆ. ಈ ಪ್ರದೇಶವನ್ನು ಈಗ ಬಂಗ್ಲೆಗುಡ್ಡೆ ಎಂದು ಕರೆಯುತ್ತಾರೆ. ಬ್ರಿಟಿಷರ ಖಜಾನೆ ಬಂಗ್ಲೆ ಇದ್ದ ಕಾರಣಕ್ಕೆ ಇಲ್ಲಿಗೆ ಬಂಗ್ಲೆಗುಡ್ಡೆ ಎಂಬ ಹೆಸರು ಬಂದಿದೆ ಎನ್ನಲಾಗ್ತಿದೆ. ಸ್ವಾತಂತ್ರ್ಯ ಧ್ವಜ ಹಾರಾಡಿದ ಬೆಳ್ಳಾರೆಯ ಈ ಕೋಟೆಯನ್ನು ಸ್ಮಾರಕವಾಗಿ ರಕ್ಷಿಸಿ, ಇಲ್ಲಿ ಪ್ರತಿ ವರ್ಷ ತ್ರಿವರ್ಣ ಧ್ವಜ ಹಾರಿಸಬೇಕೆಂಬುದು ಇಲ್ಲಿನ ಜನರ ಆಗ್ರಹ.

ಹಿನ್ನೆಲೆ:

ಬ್ರಿಟಿಷ್ ಗವರ್ನರ್ ಜನರಲ್ ಲಾರ್ಡ್ ಡಾಲ್ ಹೌಸಿ ಹೊರಡಿಸಿದ ನಿಯಮಾವಳಿ ಪ್ರಕಾರ ಮಕ್ಕಳಿಲ್ಲದ ಭಾರತೀಯ ರಾಜರುಗಳು ಬ್ರಿಟಿಷರ ಅನುಮತಿ ಇಲ್ಲದೆ ದತ್ತು ತೆಗೆದುಕೊಳ್ಳುವಂತಿರಲಿಲ್ಲ. ಒಂದು ವೇಳೆ ಅನುಮತಿ ಸಿಗದಿದ್ದರೆ ಆ ರಾಜನ ಸಂಪೂರ್ಣ ರಾಜ್ಯವು ಬ್ರಿಟಿಷರಿಗೆ ಸೇರುತ್ತಿತ್ತು. ಡಾಲ್ ಹೌಸಿ ತಂದ ಈ ನಿಯಮದಿಂದ ಸುಳ್ಯ, ಬೆಳ್ಳಾರೆ, ಕೊಡಗು ಬ್ರಿಟಿಷರ ಪಾಲಾಗುವ ಸಾಧ್ಯತೆ ಎದುರಾಗಿತ್ತು ಎಂಬುದು ಚರಿತ್ರೆ.

ಕೊಡಗಿನ ಕೊನೆಯ ಅರಸ ಚಿಕ್ಕವೀರ ರಾಜೇಂದ್ರನನ್ನು ಬ್ರಿಟಿಷರು ಪದಚ್ಯುತಗೊಳಿಸುತ್ತಾರೆ. ಕೊಡಗಿನ ಅರಸರ ವಂಶಕ್ಕೆ ಸೇರಿದವರು ಯಾರು ಇಲ್ಲದೇ ಇರುವುದರಿಂದ ಕೊಡಗು ರಾಜ್ಯವನ್ನು ಬ್ರಿಟಿಷರು ವಶಪಡಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಸುಳ್ಯ, ಬೆಳ್ಳಾರೆ, ಸೇರಿದಂತೆ ಪಂಜ ಸೀಮೆಯನ್ನು ಬ್ರಿಟಿಷರು ಸೌತ್ ಕೆನರಾ ಜಿಲ್ಲೆಗೆ ಸೇರಿಸಿದರು. ಕೊಡಗಿನ ಭಾಗವಾಗಿದ್ದ ಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿದ್ದು ಸುಳ್ಯದ ಜನತೆಗೆ ಇಷ್ಟವಿರಲಿಲ್ಲಿ. ಕೊಡಗು ಅರಸರ ಕಾಲದಲ್ಲಿ ನೀಡುತ್ತಿದ್ದ ಭತ್ತ, ತರಕಾರಿ ತೆಂಗಿನಕಾಯಿ ಮೊದಲಾದ ವಸ್ತುಗಳ ರೂಪದಲ್ಲಿದ್ದ ಭೂಕಂದಾಯವನ್ನು ಬ್ರಿಟಿಷರು ಹಣದ ರೂಪದಲ್ಲಿ ಕೊಡಬೇಕೆಂಬ ನಿಯಮವನ್ನು ಜಾರಿಗೆ ತಂದರು. ಇದರಿಂದಾಗಿ ಸುಳ್ಯದ ರೈತಾಪಿ ಜನರು ತೀವ್ರವಾಗಿ ಅಸಮಾಧಾನಗೊಂಡರು.

ಲಾಂಛನ

ಸುಳ್ಯದ ಜನರು ಬ್ರಿಟಿಷರನ್ನು ಹೊಡೆದೋಡಿಸಿ ಕೊಡಗನ್ನು ವಶಪಡಿಸಿಕೊಂಡು ಆಡಳಿತವನ್ನು ಪುನರಾರಂಭಿಸಬೇಕೆಂದು ಒಮ್ಮತದಿಂದ ನಿರ್ಧರಿಸಿದರು. ಇದರ ಫಲವಾಗಿ ಸುಳ್ಯದ ಬೆಳ್ಳಾರೆ ಪರಿಸರದಲ್ಲಿ ಸ್ವಾತಂತ್ರ್ಯ ಸಮರ ಆರಂಭವಾಗಿ 1837 ಎಪ್ರಿಲ್ 5 ರಂದು ಮಂಗಳೂರಿನ ಬ್ರಿಟಿಷ್ ಕಲೆಕ್ಟರ್​ ಕಚೇರಿಯ ಎದುರು ಸ್ವಾತಂತ್ರ್ಯ ಧ್ವಜ ನೆಟ್ಟು, 13 ದಿನಗಳ ಕಾಲ ಕೊಡಗು, ಕಾಸರಗೋಡು, ದ.ಕ.ಜಿಲ್ಲೆಯನ್ನೊಳಗೊಂಡ ಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಸಲಾಯಿತು ಎನ್ನುವುದು ಚರಿತ್ರೆ. ಹೀಗಾಗಿ ಮೊದಲ ಸ್ವಾತಂತ್ರ್ಯ ಹೋರಾಟ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆಯಿತು ಎಂಬುದು ಐತಿಹಾಸ.

ABOUT THE AUTHOR

...view details