ಸುಳ್ಯ :ಸುಳ್ಯದ ಶಾಂತಿನಗರದಲ್ಲಿ ನಡೆದ ಸಂಪತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಸುಳ್ಯಕ್ಕೆ ಕರೆ ತಂದಿದ್ದಾರೆ.
ಕಳೆದ ಗುರುವಾರ ಬೆಳ್ಳಂಬೆಳಗ್ಗೆ ಈ ಹಿಂದೆ ನಡೆದ ಬಾಲಚಂದ್ರ ಕಳಗಿ ಕೊಲೆ ಆರೋಪಿ ಸಂಪತ್ ಎಂಬುವವನ ಮೇಲೆ ಗುಂಡು ಹಾರಿಸಿ ಕತ್ತಿಯಿಂದ ಹಲ್ಲೆ ಮಾಡಿ ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದರು.
ಈ ಕುರಿತು ತನಿಖೆ ಕೈಗೊಂಡ ಪೊಲೀಸರು, ಶುಕ್ರವಾರ ಸಂಜೆ ಆರೋಪಿಗಳು ಬಳಸಿದ್ದ ಕಾರನ್ನು ಅರಂತೋಡಿನ ಸಮೀಪ ರಬ್ಬರ್ ತೋಟದಲ್ಲಿ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಆರೋಪಿಗಳ ಹೆಸರನ್ನು ಬಹಿರಂಗ ಪಡಿಸಿಲ್ಲ. ಇದರ ಜೊತೆಗೆ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿ, ಸುಳ್ಯ ಎಸ್ಐ ಹರೀಶ್, ಹಾಗೂ ಡಿಸಿಐಬಿ ಪೊಲೀಸ್ ಸಹಕಾರದೊಂದಿಗೆ ಆರೋಪಿಗಳನ್ನು ಬಂಧಿಸಲಾಗಿದೆ.