ಮಂಗಳೂರು:ನಾನು ಅಧಿಕಾರದ ಹಿಂದೆ ಬಿದ್ದಿಲ್ಲ. ಒಂದು ಸಂಘಟನೆಯ ವಿಚಾರಧಾರೆ ಅಡಿಯಲ್ಲಿ ಬಂದಿದ್ದೇನೆ. ಹಾಗಾಗಿ ನನ್ನ ಬಗ್ಗೆ ಯಾರಿಗೂ ಸಂಶಯ ಬೇಡ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.
ನಾನು ಅಧಿಕಾರದ ಹಿಂದೆ ಬಿದ್ದಿಲ್ಲ: ಸ್ಪಷ್ಟನೆ ನೀಡಿದ ಸುಳ್ಯ ಶಾಸಕ ಅಂಗಾರ - mla angara
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಸುಳ್ಯ ಶಾಸಕ ಅಂಗಾರ, ನನಗೆ ಅಧಿಕಾರದ ಆಸೆ ಇಲ್ಲ ಎಂದರು.
ನಗರದ ನವಭಾರತ ಸರ್ಕಲ್ ಬಳಿಯಿರುವ ರಮಣ ಪೈ ಸಭಾಂಗಣದಲ್ಲಿ ನಡೆದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಬಹಳಷ್ಟು ಪಕ್ಷಗಳು ಇವೆ. ಆದರೆ ಭಾರತೀಯ ಜನತಾ ಪಕ್ಷ ಒಂದು ವಿಭಿನ್ನ ಪಕ್ಷ. ರಾಜಕೀಯದಲ್ಲಿ ಧರ್ಮ ಇರಬೇಕು. ಆದರೆ ನಮ್ಮ ಪಕ್ಷ ರಾಜ್ಯಾಂಗದಲ್ಲಿ ಧರ್ಮ ಇರುವ ಪಕ್ಷ ಎಂದು ತಿಳಿಸಿದರು.
ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ಭಾರತ ದೇಶದ ಬಗ್ಗೆ ಯಾವ ಉದ್ದೇಶ ಇತ್ತೋ, ಅದು ಈಗ ಈಡೇರುವ ಕಾಲ ಬಂದಿದೆ. ನಮ್ಮ ಬಾಕಿ ಉಳಿದಿರುವ, ಇರುವ ಉದ್ದೇಶಗಳು ಖಂಡಿತವಾಗಿ ಈಡೇರುತ್ತದೆ. ಆ ಉದ್ದೇಶಗಳು ಈಡೇರಬೇಕಾದರೆ ನಮ್ಮೆಲ್ಲರ ಮನಸ್ಸು, ಭಾವನೆಗಳು ಒಂದಾಗಬೇಕು. ಇಂದು ನಮ್ಮ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಾವೆಲ್ಲರೂ ಅವರ ಜೊತೆಗಿದ್ದೇವೆ. ಸಹಕಾರ ನೀಡುತ್ತೇವೆ ಎಂದರು.