ಸುಳ್ಯ: ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಸುಳ್ಯ ಶಾಸಕ ಎಸ್.ಅಂಗಾರ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದ್ದು, ಶಾಸಕರು ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.
ಸುಳ್ಯ ಶಾಸಕ ಎಸ್.ಅಂಗಾರ ಅವರಿಗೆ ಕೋವಿಡ್ ದೃಢ - ಶಾಸಕ ಎಸ್ ಅಂಗಾರ ಹೋಂ ಕ್ವಾರಂಟೈನ್ ನ್ಯೂಸ್
ಸುಳ್ಯ ಶಾಸಕ ಎಸ್.ಅಂಗಾರ ಮತ್ತು ಅವರ ವಾಹನ ಚಾಲಕನಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
![ಸುಳ್ಯ ಶಾಸಕ ಎಸ್.ಅಂಗಾರ ಅವರಿಗೆ ಕೋವಿಡ್ ದೃಢ ಶಾಸಕ ಎಸ್ ಅಂಗಾರ](https://etvbharatimages.akamaized.net/etvbharat/prod-images/768-512-03:30:29:1598608829-kn-dk-01-mla-corona-av-pho-kac10008-28082020152618-2808f-1598608578-726.jpg)
ಶಾಸಕ ಎಸ್ ಅಂಗಾರ
ಬೆಂಗಳೂರಿನಿಂದ ಆಗಮಿಸಿದ ಶಾಸಕರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದರು. ವರದಿಯಲ್ಲಿ ಕೊರೊನಾ ಪಾಸಿಟಿವ್ ಎಂದು ಗೊತ್ತಾಗಿದೆ.
ಇನ್ನು ಶಾಸಕರ ವಾಹನ ಚಾಲಕನಿಗೂ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಇಬ್ಬರೂ ತಮ್ಮ ತಮ್ಮ ಮನೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.