ಸುಳ್ಯ: ಸತತವಾಗಿ ಆರು ಬಾರಿ ಸುಳ್ಯ ಶಾಸಕರಾಗಿ ಆಯ್ಕೆಯಾದ ಸೋಲಿಲ್ಲದ ಸರದಾರ ಮತ್ತು ಸರಳತೆಯ ಪ್ರತಿರೂಪ ಎಂಬ ಖ್ಯಾತಿ ಪಡೆದಿರುವ ಸುಳ್ಯ ಶಾಸಕ ಎಸ್.ಅಂಗಾರ ರವರು ಸಂಪುಟ ಪುನರ್ ರಚನೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ್ದಾರೆ.
ಸಚಿವ ಸಂಪುಟ ಪುನರ್ ರಚನೆ : ಬೆಂಗಳೂರು ತಲುಪಿದ ಸುಳ್ಯ ಶಾಸಕ ಎಸ್.ಅಂಗಾರ - ಸತತವಾಗಿ ಆರು ಬಾರಿ ಸುಳ್ಯ ಶಾಸಕರಾಗಿ ಆಯ್ಕೆಯಾದ ಸೋಲಿಲ್ಲದ ಸರದಾರ ಶಾಸಕ ಎಸ್.ಅಂಗಾರ
ಸರಳ ಸಜ್ಜನಿಕೆಯ ಶಾಸಕ ಎಂಬ ಖ್ಯಾತಿಯ ಎಸ್.ಅಂಗಾರ ಬೆಂಗಳೂರಿಗೆ ಬಂದಿರುವ ಕಾರ್ಯಕರ್ತರಿಗಾಗಿ ಸ್ವತಃ ತಾವೇ ರಾತ್ರಿ ಅಡುಗೆ ತಯಾರಿಯಲ್ಲಿ ನಿರತರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕಡಬದಲ್ಲಿ ನಡೆದ ಕಾರ್ಯಕ್ರಮವೊಂದರ ನಂತರ ಈಟಿವಿ ಭಾರತದ ಜೊತೆಗೆ ಮಾತನಾಡಿದ ಶಾಸಕರು, ಸಮಿತಿಯ ಮೀಟಿಂಗ್ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೋಗುವುದಾಗಿ ತಿಳಿಸಿದ್ದಾರೆ. ಆದರೆ ಅಧಿಕೃತ ಮೂಲಗಳ ಪ್ರಕಾರ ಬೆಂಗಳೂರಿನಿಂದ ಕರೆ ಬಂದಿರುವ ಹಿನ್ನೆಲೆ ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.
ಸರಳ ಸಜ್ಜನಿಕೆಯ ಶಾಸಕ ಎಂಬ ಖ್ಯಾತಿಯ ಎಸ್.ಅಂಗಾರ ಬೆಂಗಳೂರಿಗೆ ಬಂದಿರುವ ಕಾರ್ಯಕರ್ತರಿಗಾಗಿ ಸ್ವತಃ ತಾವೇ ರಾತ್ರಿ ಅಡುಗೆ ತಯಾರಿಯಲ್ಲಿ ನಿರತರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶಾಸಕ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ಖಚಿತ ಎಂದು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.