ಸುಳ್ಯ :ಆಟೋ ಚಾಲಕನ ಮೇಲೆ ಯುವಕರು ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆಟೋ ಚಾಲಕನ ಮೇಲೆ ಹಲ್ಲೆ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ - ಸುಳ್ಯ ಆಟೋ ಚಾಲಕನ ಮೇಲೆ ಹಲ್ಲೆ ಸುದ್ದಿ
ನಗರದ ಆಟೋ ಚಾಲಕರ ಮೇಲೆ ಯುವಕರು ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಟೋ ಚಾಲಕನ ಮೇಲೆ ಹಲ್ಲೆ
ನಗರದ ಕುಕ್ಕಾಜೆಕಾನದ ಆಟೋ ಚಾಲಕ ಪುರುಷೋತ್ತಮ ಎಂಬವರಿಗೆ ಯುವಕರು ಹಲ್ಲೆ ನಡೆಸಿ ಸ್ವತಃ ತಾವೇ ವಿಡಿಯೋ ಮಾಡಿ ಪೊಲೀಸರಿಗೆ ತಿಳಿಸದಂತೆ ಎಚ್ಚರಿಕೆ ನೀಡಿದ್ದಾರೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರಾಜ್ ಮುಖೇಶ್ ಎಂಬುವವರು ಸೇರಿ ಇತರರು ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.