ಮಂಗಳೂರು:ಬೆಳ್ತಂಗಡಿ ತಾಲೂಕಿನ ಕಾಜೂರು ದರ್ಗಾದ ಬಳಿಯ ಕಾಜೂರು ಮನೆ ಎಂಬಲ್ಲಿ ಹಿಟಾಚಿಯಿಂದ ಕೆಲಸ ಮಾಡುತ್ತಿರುವಾಗ ಗಾಯಗೊಂಡ ಕಾಳಿಂಗ ಸರ್ಪಕ್ಕೆ ಮಂಗಳೂರಿನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಗಾಯಗೊಂಡ ಕಾಳಿಂಗ ಸರ್ಪಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ - ಕಾಳಿಂಗ ಸರ್ಪಕ್ಕೆ ಶಸ್ತ್ರಚಿಕಿತ್ಸೆ
11 ಅಡಿ ಉದ್ದ, 4.4 ಕೆಜಿ ಗಾತ್ರದ ಈ ಕಾಳಿಂಗ ಸರ್ಪವು ಮೇ 11ರಂದು ಕಾಜೂರು ಮನೆಯ ತುಂಗಪ್ಪ ಪೂಜಾರಿಯವರ ಜಮೀನಿನಲ್ಲಿ ಹಿಟಾಚಿಯಿಂದ ಕೆಲಸ ಮಾಡುತ್ತಿರುವ ಗಾಯಗೊಂಡಿತ್ತು. ಈ ಕಾಳಿಂಗ ಸರ್ಪದ ಬಾಲದಿಂದ ಒಂದೂವರೆ ಅಡಿ ಮೇಲ್ಭಾಗದಲ್ಲಿ ತುಂಡಾದ ರೀತಿಯಲ್ಲಿ ಗಾಯವಾಗಿದೆ. ತಲೆಯಿಂದ ಎರಡು ಅಡಿ ಕೆಳಗೆ ಚರ್ಮ ಸುಳಿದು ಗಾಯವಾಗಿ ಜೀವನ್ಮರಣ ಹೋರಾಟದಲ್ಲಿತ್ತು.
11 ಅಡಿ ಉದ್ದ, 4.4 ಕೆಜಿ ಗಾತ್ರದ ಈ ಕಾಳಿಂಗ ಸರ್ಪವು ಮೇ 11ರಂದು ಕಾಜೂರು ಮನೆಯ ತುಂಗಪ್ಪ ಪೂಜಾರಿಯವರ ಜಮೀನಿನಲ್ಲಿ ಹಿಟಾಚಿಯಿಂದ ಕೆಲಸ ಮಾಡುತ್ತಿರುವ ಗಾಯಗೊಂಡಿತ್ತು. ಈ ಕಾಳಿಂಗ ಸರ್ಪದ ಬಾಲದಿಂದ ಒಂದೂವರೆ ಅಡಿ ಮೇಲ್ಭಾಗದಲ್ಲಿ ತುಂಡಾದ ರೀತಿಯಲ್ಲಿ ಗಾಯವಾಗಿದೆ. ತಲೆಯಿಂದ ಎರಡು ಅಡಿ ಕೆಳಗೆ ಚರ್ಮ ಸುಳಿದು ಗಾಯವಾಗಿ ಜೀವನ್ಮರಣ ಹೋರಾಟದಲ್ಲಿತ್ತು. ತಕ್ಷಣ ಉರಗ ರಕ್ಷಕ ಜಾಯ್ ಎಂಬವರು ಸ್ಥಳಕ್ಕೆ ಧಾವಿಸಿ, ರಕ್ಷಣೆ ಮಾಡಿದ್ದಾರೆ.
ಆ ಬಳಿಕ ಜಾಯ್ ಅವರು, ಅರಣ್ಯ ಇಲಾಖೆಯವರ ಸಹಕಾರದಿಂದ ಬೆಳ್ತಂಗಡಿ ತಹಶೀಲ್ದಾರರ ಅನುಮತಿ ಪಡೆದು ಕಾಳಿಂಗ ಸರ್ಪವನ್ನು ಮಂಗಳೂರಿಗೆ ಚಿಕಿತ್ಸೆ ನೀಡಲು ತೆಗೆದುಕೊಂಡು ಬಂದಿದ್ದರು. ಬಳಿಕ ವೈದ್ಯ ಡಾ.ಯಶಸ್ವಿ ಹಾಗೂ ತಂಡವು ಮೇ 12ರಂದು ಸಂಜೆ 5ರಿಂದ 7ರವರೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ. ಇದೀಗ ಶಸ್ತ್ರಚಿಕಿತ್ಸೆಯಿಂದ ಕಾಳಿಂಗ ಸರ್ಪವು ಚೇತರಿಸಿಕೊಳ್ಳುತ್ತಿದ್ದು, ಮತ್ತೆ ಹಿಂದಿನ ಸ್ಥಿತಿಗೆ ತಲುಪಲು ಒಂದು ತಿಂಗಳು ತಗುಲಲಿದೆ. ಅಲ್ಲಿಯವರೆಗೆ ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯರು ದಿನವೂ ಅದರ ಶುಶ್ರೂಷೆ ನಡೆಸಲಿದ್ದಾರೆ.