ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರ ಮರಣೋತ್ತರ ಪರೀಕ್ಷೆ ವರದಿಯನ್ನು ತನಿಖಾಧಿಕಾರಿಗಳಿಗೆ ನೀಡಲಾಗಿದೆ ಎಂದು ವೆನ್ಲಾಕ್ ಜಿಲ್ಲಾಸ್ಪತ್ರೆ ಅಧೀಕ್ಷಕಿ ರಾಜೇಶ್ವರಿ ದೇವಿ ಮಾಹಿತಿ ನೀಡಿದ್ದಾರೆ.
ಕಾಫಿ ಡೇ ಮಾಲೀಕ ಸಾವು ಪ್ರಕರಣ: ತನಿಖಾಧಿಕಾರಿಗಳಿಗೆ ಮರಣೋತ್ತರ ವರದಿ ಸಲ್ಲಿಕೆ - ಮಂಗಳೂರು ಸುದ್ದಿ
ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಲಾಗಿದ್ದು, ಇದರಿಂದ ಅವರ ಸಾವಿನ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.
Submission of Siddharth posthumous preliminary report to inspectors
ಸಿದ್ದಾರ್ಥ್ ಮರಣೋತ್ತರ ಪ್ರಾಥಮಿಕ ವರದಿಯನ್ನು ತನಿಖಾಧಿಕಾರಿ ಎಸಿಪಿ ಕೋದಂಡರಾಮ್ ಅವರಿಗೆ ಹಸ್ತಾಂತರ ಮಾಡಲಾಗಿದೆ. ದೇಹದ ಯಾವ ಭಾಗದಲ್ಲಿ ಏನಾಗಿದೆ ಎಂಬುದರ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಾವಿಗೆ ಸ್ಪಷ್ಟ ಕಾರಣವೇನು ಅನ್ನೋದು ಅಂತಿಮ ವರದಿಯಲ್ಲಿ ಗೊತ್ತಾಗಲಿದೆ. ಪ್ರಾಥಮಿಕ ವರದಿಯಲ್ಲಿ ಆತ್ಮಹತ್ಯೆ ಸಾಧ್ಯತೆ ಬಗ್ಗೆ ಉಲ್ಲೇಖವಿದೆ ಎಂದು ಡಾ.ರಾಜೇಶ್ವರಿ ದೇವಿ ತಿಳಿಸಿದ್ದಾರೆ.
ಜುಲೈ 29, ಸೋಮವಾರ ಸಂಜೆ ಕಾಣೆಯಾಗಿದ್ದ ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರ ಮೃತದೇಹ ನೇತ್ರಾವತಿ ಹಿನ್ನೀರಿನಹೊಯ್ಗೆ ಬಜಾರ್ ಬಳಿ ಪತ್ತೆಯಾಗಿತ್ತು.