ಕರ್ನಾಟಕ

karnataka

ETV Bharat / state

ಸುಳ್ಯದ ಪ್ರಭಾರ ಉಪ ನೋಂದಣಾಧಿಕಾರಿ ವಿರುದ್ಧ ಲಂಚ ಪಡೆದ ಆರೋಪ... ವೀಡಿಯೊ ವೈರಲ್ - ಲಂಚ

ಸುಳ್ಯದ ಪ್ರಭಾರ ಉಪ ನೋಂದಣಾಧಿಕಾರಿ ಸಾರ್ವಜನಿಕರಿಂದ ಲಂಚ ಪಡೆದಿದ್ದಾರೆ ಎನ್ನಲಾಗಿದ್ದು, ಲಂಚ ಪಡೆಯುವ ವೇಳೆ ಇದು ತನಗೆ ಮಾತ್ರವಲ್ಲ, ಎಲ್ಲರಿಗೂ ಇದರಲ್ಲಿ ಪಾಲಿದೆ ಎಂದು ಹೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಲಂಚ ಪಡೆಯುತ್ತಿರುವ ಅಧಿಕಾರಿ

By

Published : Jun 8, 2019, 4:56 PM IST

ಮಂಗಳೂರು: ಆಸ್ತಿ ನೋಂದಣಿಗೆ ಬರುವವರಿಂದ ಸುಳ್ಯದ ಪ್ರಭಾರ ಉಪ ನೋಂದಣಾಧಿಕಾರಿ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿರುವ ವಿಡಿಯೋ ಒಂದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸುಳ್ಯದ ಪ್ರಭಾರ ಉಪ ನೊಂದಣಾಧಿಕಾರಿ ಸಾರ್ವಜನಿಕರಿಂದ ಲಂಚ ಪಡೆದಿದ್ದಾರೆ ಎನ್ನಲಾಗಿದ್ದು, ಲಂಚ ಪಡೆಯುವ ವೇಳೆ ಇದು ತನಗೆ ಮಾತ್ರವಲ್ಲ, ಎಲ್ಲರಿಗೂ ಇದರಲ್ಲಿ ಪಾಲಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ವೈರಲ್​ ಆಗಿರುವ ವಿಡಿಯೋ

ಈ ಕಚೇರಿಯಲ್ಲಿ ಭ್ರಷ್ಟಾಚಾರ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ಇನ್ನೂ ನಿಯಂತ್ರಣವಾಗಿಲ್ಲ. ಕಚೇರಿಯ ಎಲ್ಲಾ ಕಡತಗಳ ವ್ಯವಹಾರಗಳನ್ನು ಆನ್​ಲೈನ್ ಮೂಲಕ ಮಾಡಲಾಗಿದೆಯಾದರೂ ಅರ್ಜಿಯ ಕೊನೆಯಲ್ಲಿ ಅಧಿಕಾರಿಯ ಸಹಿಗಾಗಿ ಅಧಿಕಾರಿಯ ಮುಂದೆ ಬರಲೇಬೇಕಾದ ಅನಿವಾರ್ಯತೆ ಸೃಷ್ಟಿಸಲಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಸದ್ಯ ಅಧಿಕಾರಿಯೊಬ್ಬರು ಈ ರೀತಿ ಸಾರ್ವಜನಿಕರಿಂದ ಲಂಚ ಪಡೆದಿದ್ದಾರೆ ಎಂಬ ವಿಡಿಯೋ ಹರಿದಾಡುತ್ತಿದ್ದು, ಈ ಕುರಿತು ಯಾವುದೇ ರೀತಿಯ ದೂರು ದಾಖಲಾಗಿಲ್ಲ.

ABOUT THE AUTHOR

...view details