ಮಂಗಳೂರು:ವಿದ್ಯಾರ್ಥಿಗಳ ಫೋಟೋ ವೈರಲ್ ಆಗಿದ್ದು, ಪೊಲೀಸರು ಸ್ಪಂದಿಸಿದ್ದಾರೆ. ಖಾಸಗಿ ವಾಹನವೊಂದರ ಹಿಂದೆ ವಿದ್ಯಾರ್ಥಿಗಳು ನೇತಾಡುತ್ತಾ ಪ್ರಯಾಣ ಮಾಡುತ್ತಿದ್ದ ಪೋಟೋವನ್ನು ಪೊಲೀಸ್ ಇಲಾಖೆ ಟ್ವಿಟರ್ ಖಾತೆಯಲ್ಲಿ ಟ್ಯಾಗ್ ಮಾಡಲಾಗಿತ್ತು.
ಮಂಗಳೂರು ವಿದ್ಯಾರ್ಥಿಗಳ ಫೋಟೋ ವೈರಲ್: ಟ್ವೀಟ್ಗೆ ಸ್ಪಂದಿಸಿದ ಪೊಲೀಸ್ ಆಯುಕ್ತ
ಮಂಗಳೂರು ವಿದ್ಯಾರ್ಥಿಗಳ ಫೋಟೋ ವೈರಲ್ ಆಗಿದ್ದು, ಪೊಲೀಸರು ಸ್ಪಂದಿಸಿದ್ದಾರೆ. ಖಾಸಗಿ ವಾಹನವೊಂದರ ಹಿಂದೆ ವಿದ್ಯಾರ್ಥಿಗಳು ನೇತಾಡುತ್ತಾ ಪ್ರಯಾಣ ಮಾಡುತ್ತಿದ್ದ ಪೋಟೋವನ್ನು ಪೊಲೀಸ್ ಇಲಾಖೆ ಟ್ವಿಟರ್ ಖಾತೆಯಲ್ಲಿ ಟ್ಯಾಗ್ ಮಾಡಲಾಗಿತ್ತು.
ಮೂಡುಬಿದಿರೆ-ಮಂಗಳೂರು ರಸ್ತೆಯ ವಿದ್ಯಾಗಿರಿ ಬಸ್ ಸ್ಟಾಪ್ನಲ್ಲಿ ಈ ದೃಶ್ಯ ಕಂಡು ಬಂದಿತ್ತು. ವಿದ್ಯಾರ್ಥಿಗಳಿಗೆ ಹೆಚ್ಚು ಕಮ್ಮಿ ಆದಲ್ಲಿ ಯಾರು ಜವಾಬ್ದಾರಿ? ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಮ್ಮಲ್ಲಿ ಮನವಿ ಎಂದು ಸೂರಜ್ ಜೈನ್ ಎಂ. ಎಂಬವರು ಖಾಸಗಿ ಬಸ್ಸೊಂದರ ಹಿಂದೆ ಇಬ್ಬರು ವಿದ್ಯಾರ್ಥಿಗಳು ನೇತಾಡುವ ನಾಲ್ಕು ಫೋಟೋಗಳನ್ನು ಪೊಲೀಸ್ ಆಯುಕ್ತರಿಗೆ ಇಂದು ಮಧ್ಯಾಹ್ನ 2.24ಕ್ಕೆ ಟ್ವೀಟ್ ಮಾಡಿದ್ದರು.
ತಕ್ಷಣ ಸ್ಪಂದಿಸಿದ ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಈ ಬಗ್ಗೆ ಪ್ರಕರಣ ದಾಖಲಿಸಿ ಬಸ್ ಚಾಲಕನ ಚಾಲನಾ ಪರವಾನಗಿ ಹಾಗೂ ಬಸ್ ಪರವಾನಗಿ ರದ್ದುಗೊಳಿಸುವುದಾಗಿ ಮರು ಟ್ವೀಟ್ ಮಾಡಿ ಭರವಸೆ ನೀಡಿದ್ದಾರೆ.