ಮಂಗಳೂರು :ಚಾಲಕನ ಅಜಾಗರೂಕತೆಯಿಂದ ಜೀಪ್ ಪಲ್ಟಿಯಾಗಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದ.ಕ.ಜಿಲ್ಲೆಯ ಉಪ್ಪಿನಂಗಡಿ ಬಳಿಯ ನೆಲ್ಯಾಡಿ ಪಡುಬೆಟ್ಟು ಎಂಬಲ್ಲಿ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ನಡೆದಿದೆ.
ಯಕ್ಷಗಾನ ನೋಡಿ ಬರುತ್ತಿದ್ದ ವಿದ್ಯಾರ್ಥಿ ಜೀಪ್ ಪಲ್ಟಿಯಾಗಿ ಸಾವು - undefined
ಯಕ್ಷಗಾನ ನೋಡಿ ವಾಪಸಾಗುವ ಸಂದರ್ಭದಲ್ಲಿ ಜೀಪ್ ಪಲ್ಟಿಯಾಗಿ ವಿದ್ಯಾರ್ಥಿ ಸಾವನ್ನಪ್ಪಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.

ಜೀಪ್ ಪಲ್ಟಿ
ನೆಲ್ಯಾಡಿ ನಿವಾಸಿ ಸುಶ್ಮಿತ್(13) ಮೃತ ವಿದ್ಯಾರ್ಥಿಯಾಗಿದ್ದು, ರಾತ್ರಿ ಯಕ್ಷಗಾನ ವೀಕ್ಷಿಸಿ ಮುಂಜಾನೆ ಊರಿಗೆ ಹಿಂದಿರುಗುವ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.