ಬಂಟ್ವಾಳ :ದುಶ್ಚಟ ತ್ಯಜಿಸಲು ಮನೆಯವರು ಬುದ್ಧಿ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಡ್ಕಿದು ಗ್ರಾಮದ ಏಮಾಜೆಯಲ್ಲಿ ಸಂಭವಿಸಿದೆ.
ಪುತ್ತೂರು ಕಾಲೇಜೊಂದರ ವಿದ್ಯಾರ್ಥಿ ಹಾಗೂ ಏಮಾಜೆ ನಿವಾಸಿ ಶರತ್ (16) ಮೃತಪಟ್ಟವ. ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದು, ವಿಪರೀತ ಮೊಬೈಲ್ ಬಳಕೆ ಹಾಗೂ ಸಿಗರೇಟ್-ಬೀಡಿ ಸೇದುವ ಚಟ ಬೆಳೆಸಿಕೊಂಡಿದ್ದ ಎನ್ನಲಾಗಿದೆ.
ಈ ಬಗ್ಗೆ ಮನೆಯವರು ಬುದ್ಧಿವಾದ ಹೇಳಿದ್ರೂ ಕೂಡಾ ಅದನ್ನು ಕೇಳದೆ ಚಟವನ್ನೇ ಹಚ್ಚಿಕೊಂಡಿದ್ದ. ಮನನೊಂದು ಮನೆ ಪಕ್ಕ ಸೌದೆ ತರಲೆಂದು ಹೋಗಿ ಮರದ ಕೊಂಬೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಂದೆ-ತಾಯಿ ಗಮನಿಸಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದಿದ್ದು, ವಿದ್ಯಾರ್ಥಿ ಮೃತ ಪಟ್ಟಿರುವ ಬಗ್ಗೆ ವೈದ್ಯರು ದೃಢೀಕರಿಸಿದ್ದಾರೆ. ಸದ್ಯ ಈ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.