ಕರ್ನಾಟಕ

karnataka

ETV Bharat / state

ಚಾರ್ಮಾಡಿ ಚೆಕ್ ಪೋಸ್ಟ್​ನಲ್ಲಿ  ವಾಹನ, ಆರೋಗ್ಯ ತಪಾಸಣೆ

ಚಿಕ್ಕಮಗಳೂರು ಹಾಗೂ ಇನ್ನಿತರ ಜಿಲ್ಲೆಗಳಿಂದ ದ.ಕ ಜಿಲ್ಲೆಗೆ ಪ್ರವೇಶಿಸಲು ಇರುವ ಚಾರ್ಮಾಡಿ ಚೆಕ್ ಪೋಸ್ಟ್​ನಲ್ಲಿ ಆರೋಗ್ಯ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ದಿನದ 24 ಗಂಟೆ ಬಿಗಿ ತಪಾಸಣೆಗೆ ಮುಂದಾಗಿದೆ.

Vehicle and Health Check at Charmady Check Post
ಚಾರ್ಮಾಡಿ ಚೆಕ್ ಪೋಸ್ಟ್​ನಲ್ಲಿ ಕಟ್ಟುನಿಟ್ಟಿನ ವಾಹನ, ಆರೋಗ್ಯ ತಪಾಸಣೆ

By

Published : May 4, 2020, 9:01 PM IST

ಬೆಳ್ತಂಗಡಿ: ಲಾಕ್​​​​​ಡೌನ್ ಸಡಿಲಿಕೆ ಬೆನ್ನಲ್ಲೆ ಅಂತರ್ ಜಿಲ್ಲೆಯಿಂದ ದ.ಕ ಜಿಲ್ಲೆಗೆ ಪ್ರವೇಶ ಮಾಡುವವರಿಗೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ.

ಚಿಕ್ಕಮಗಳೂರು ಹಾಗೂ ಇನ್ನಿತರ ಜಿಲ್ಲೆಗಳಿಂದ ದ.ಕ ಜಿಲ್ಲೆಗೆ ಪ್ರವೇಶಿಸಲು ಇರುವ ಚಾರ್ಮಾಡಿ ಚೆಕ್ ಪೋಸ್ಟ್​ನಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ದಿನದ 24 ಗಂಟೆ ಬಿಗಿ ತಪಾಸಣೆಗೆ ಮುಂದಾಗಿದೆ. ತರಕಾರಿ ಸಾಗಣೆ ವಾಹನಕ್ಕೆ ಮುಕ್ತ ಅವಕಾಶ ಇದುವರೆಗೆ ಇದ್ದು ,ವೈದ್ಯಕೀಯ ಅಗತ್ಯಕ್ಕೆ ಸಮರ್ಪಕ ದಾಖಲೆಗಳ ಆಧಾರದಂತೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು.

ಆದ್ರೆ ಇದೀಗ ಪ್ರತಿಯೊಬ್ಬರ ದಾಖಲೆಗಳನ್ನು ಪರಿಶಿಲನೆ ಮಾಡುತ್ತಿರುವುದಲ್ಲದೇ ಹೊರ ಜಿಲ್ಲೆಯಿಂದ ದ.ಕ ಜಿಲ್ಲೆಗೆ ಉಳಿದು ಕೊಳ್ಳಲು ಬರುವವರಿಗೆ ಸೀಲ್ ಹಾಕಿ ಕಡ್ಡಾಯ ಹಾಗೂ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ. ಜೊತೆಗೆ ಆರೋಗ್ಯ ಇಲಾಖಾ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡುತ್ತಿದ್ದು, ಅಧಿಕ ಜ್ವರದ ಲಕ್ಷಣ ಕಂಡುಬಂದರೆ ತಕ್ಷಣ 108 ವಾಹನದ ಮೂಲಕ ಕ್ವಾರಂಟೈನ್ ಗೆ ನಿಗದಿಗೊಳಿಸಿದ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಚಾಲಕರನ್ನು ಅವರೊಂದಿಗಿರುವ ಸಹ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಖಾಸಗಿ ಪ್ರಯಾಣಿಕರ ದಾಖಲೆ ಪರಿಶೀಲಿಸಿ ಬಳಿಕ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ದಿನದ 24 ಗಂಟೆ ಕಾರ್ಯಾಚರಣೆ ಇರುವುದರಿಂದ ಸಿಬ್ಬಂದಿ ಮೂರು ಹೊತ್ತಿನ ವಿಭಾಗ ಮಾಡಲಾಗಿದೆ. ಆರೋಗ್ಯ ಇಲಾಖೆಯ ಎರಡು ಸಿಬ್ಬಂದಿ, ಸಂಚಾರಿ ಠಾಣಾ ಎಸ್​ಐ ಸಹಿತ ಸಿಬ್ಬಂದಿ, ಧರ್ಮಸ್ಥಳ ಠಾಣಾ ಸಿಬ್ಬಂದಿ, ಕಂದಾಯ ಇಲಾಖಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ABOUT THE AUTHOR

...view details