ಮಂಗಳೂರು:ಟೆಸ್ಟ್ ಡ್ರೈವ್‌ಗೆಂದು ಅಪರಿಚಿತ ವ್ಯಕ್ತಿಯೊಬ್ಬ ಸ್ಕೂಟರ್ ಕೊಂಡೊಯ್ದು ಪರಾರಿಯಾದ ಘಟನೆ ನಡೆದಿದೆ.
ನಗರದ ಗೋರಿಗುಡ್ಡೆಯಲ್ಲಿರುವ ಹಳೆಯ ದ್ವಿಚಕ್ರ ವಾಹನಗಳ ಶೋರೂಂಗೆ ಡಿಸೆಂಬರ್ 14ರಂದು ಸಂಜೆ 6.15ಕ್ಕೆ ಅಪರಿಚಿತ ವ್ಯಕ್ತಿ ಜುಪಿಟರ್ ಸ್ಕೂಟರ್ ಪರಿಶೀಲಿಸಿ, ಟೆಸ್ಟ್ ಡ್ರೈವ್ ಮಾಡಬೇಕೆಂದು ಕೇಳಿದ್ದಾನೆ. ಈ ವೇಳೆ ಶೋರೂಂನ ವ್ಯಕ್ತಿ ಡ್ರೈವಿಂಗ್ ಲೈಸೆನ್ಸ್ ಪಡೆದು KA 70E0860 ಸಂಖ್ಯೆಯ ಸ್ಕೂಟರ್ ನೀಡಿದ್ದಾನೆ. ಆದರೆ ಟೆಸ್ಟ್ ಡ್ರೈವ್ಗೆ ಹೋದವನು ಮತ್ತೆ ತಿರುಗಿ ಬರಲೇ ಇಲ್ಲ.