ಕರ್ನಾಟಕ

karnataka

ETV Bharat / state

ಕೊರೊನಾ ಸಂಕಷ್ಟ.. ಮಂಗಳೂರಿನ ಬರ್ಕೆ ಪೊಲೀಸ್ ಸ್ಟೇಷನ್​ನಲ್ಲಿ ಸಿಬ್ಬಂದಿಗೆ ಸ್ಟೀಮಿಂಗ್! - ಪೊಲೀಸ್ ಸ್ಟೇಷನ್​ನಲ್ಲಿ ಸ್ಟೀಮಿಂಗ್ ವ್ಯವಸ್ಥೆ

ಕೊರೊನಾದಿಂದ ಜನರು ರಕ್ಷಣೆಗೆ ಬೇರೆ ಬೇರೆ ಪ್ರಯತ್ನಗಳನ್ನು ಮಾಡಿದ್ದಾರೆ. ಅದರಲ್ಲಿ ಬಿಸಿ ನೀರಿನ ಹಬೆಯನ್ನು ಸ್ಟೀಮ್ ಮಾಡುವುದು ಒಂದು. ಇದನ್ನು ಮಾಡಿದರೆ ಕೊರೊನಾ ವೈರಸ್ ಹಾವಳಿಯಿಂದ ದೂರವಿರಬಹುದೆಂಬುದು ನಂಬಿಕೆ..

mangalore
mangalore

By

Published : Apr 30, 2021, 7:31 PM IST

Updated : Apr 30, 2021, 8:45 PM IST

ಮಂಗಳೂರು :ಕೊರೊನಾ ವಾರಿಯರ್ಸ್ ಆಗಿರುವ ಪೊಲೀಸರು ವೈರಸ್ ಹಾವಳಿಯಿಂದ ಸಂಕಷ್ಟಕ್ಕೀಡಾಗಿದ್ದಾರೆ‌. ಇದಕ್ಕಾಗಿ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ವಿಶೇಷ ಪ್ರಯತ್ನವೊಂದನ್ನು ಮಾಡಲಾಗಿದೆ. ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಕೊರೊನಾ ವೈರಸ್ ಹಾವಳಿ ಹಿನ್ನೆಲೆ ಸ್ಟೀಮ್ ಮಾಡಲು ಉಪಕರಣ ಅಳವಡಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರ ಮಾರ್ಗದರ್ಶನದಂತೆ ಬರ್ಕೆ ಪೊಲೀಸ್ ಇನ್ಸ್ ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿ ಅವರು ತಮ್ಮ ಠಾಣೆಯಲ್ಲಿ ಈ ವ್ಯವಸ್ಥೆ ಮಾಡಿದ್ದಾರೆ. ಬರ್ಕೆ ಸ್ಟೇಷನ್ ಆವರಣದಲ್ಲಿ ಈ ಸ್ಟೀಮ್ ಉಪಕರಣ ಅಳವಡಿಕೆ ಮಾಡಲಾಗಿದೆ.

ಮಂಗಳೂರಿನ ಬರ್ಕೆ ಪೊಲೀಸ್ ಸ್ಟೇಷನ್​ನಲ್ಲಿ ಸಿಬ್ಬಂದಿಗೆ ಸ್ಟೀಮಿಂಗ್

ಕೊರೊನಾದಿಂದ ಜನರು ರಕ್ಷಣೆಗೆ ಬೇರೆ ಬೇರೆ ಪ್ರಯತ್ನಗಳನ್ನು ಮಾಡಿದ್ದಾರೆ. ಅದರಲ್ಲಿ ಬಿಸಿ ನೀರಿನ ಹಬೆಯನ್ನು ಸ್ಟೀಮ್ ಮಾಡುವುದು ಒಂದು. ಇದನ್ನು ಮಾಡಿದರೆ ಕೊರೊನಾ ವೈರಸ್ ಹಾವಳಿಯಿಂದ ದೂರವಿರಬಹುದೆಂಬುದು ನಂಬಿಕೆ. ಈ ಕಾರಣದಿಂದ ಮಂಗಳೂರಿನ ಬರ್ಕೆ ಠಾಣೆಯಲ್ಲಿ ಸ್ಟೀಮ್ ವ್ಯವಸ್ಥೆ ಮಾಡಲಾಗಿದೆ.

ಗ್ಯಾಸ್ ಮೂಲಕ ಕುಕ್ಕರ್​​ನಲ್ಲಿ ನೀರಿಗೆ ತುಳಸಿ, ಲವಂಗ ಹಾಕಿ ಕುದಿಸಲಾಗುತ್ತದೆ. ಕುಕ್ಕರ್​ನಲ್ಲಿ ನೀರು ಕುದಿದ ಬಳಿಕ ಬರುವ ಹಬೆಯನ್ನು ಪೈಪ್​ ಮೂಲಕ ಹಾದು ಬರುವಂತೆ ಮಾಡಲಾಗಿದೆ. ಪೈಪ್ ಮೂಲಕ ಬರುವ ಹಬೆಯನ್ನು ಪೊಲೀಸರು ಸುಮಾರು 5 ನಿಮಿಷಗಳ ಕಾಲ ಸ್ಟೀಮಿಂಗ್ ಮಾಡುತ್ತಾರೆ.

ಬರ್ಕೆ ಠಾಣೆಯ ಪೊಲೀಸ್ ಸಿಬ್ಬಂದಿ ಠಾಣೆಗೆ ಹೊರಗಿನಿಂದ ಒಳಬರುವ ವೇಳೆ ಸ್ಟೀಮ್ ಮಾಡಿಕೊಂಡು ಒಳಬರುತ್ತಾರೆ. ಪೊಲೀಸ್ ಠಾಣೆಗೆ ದೂರು ನೀಡಲು ಬರುವವರಿಗೂ ಮಾಡಬಹುದಾಗಿದೆ. ಸ್ಟೀಮ್ ಮಾಡಿದ ಪರಿಣಾಮ ಬಾಯಿ, ಮೂಗಿನಲ್ಲಿರುವ ವೈರಸ್ ತೊಡೆದು ಹಾಕಲು ಸಾಧ್ಯ ಎಂಬ ನಂಬಿಕೆಯಿದೆ. ಇದರಿಂದ ಆರೋಗ್ಯಕ್ಕೂ ಒಳ್ಳೆಯದು ಎಂಬ ಭಾವನೆ ಪೊಲೀಸ್ ಸಿಬ್ಬಂದಿಯಲ್ಲಿ ಮೂಡಿದೆ.

Last Updated : Apr 30, 2021, 8:45 PM IST

ABOUT THE AUTHOR

...view details