ಸುಬ್ರಹ್ಮಣ್ಯ: ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಹುಂಡಿ ಎಣಿಕೆಯ ಸಂದರ್ಭದಲ್ಲಿ ದೇಗುಲದ ಮಹಿಳಾ ಸಿಬ್ಬಂದಿವೋರ್ವರು ಹಣ ಎಗರಿಸಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ಕುಕ್ಕೆಯಲ್ಲಿ ಹುಂಡಿ ಎಣಿಕೆ ವೇಳೆ ಹಣ ಕದ್ದು ಸಿಕ್ಕಿಬಿದ್ದ ಮಹಿಳಾ ಸಿಬ್ಬಂದಿ - ಕುಕ್ಕೆ ಸುಬ್ರಹ್ಮಣ್ಯ ದೇಗುಲ ಹುಂಡಿ ಎಣಿಕೆ ವೇಳೆ ಹಣ ಕಳ್ಳತನ
ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಹುಂಡಿ ಎಣಿಕೆಯ ಸಂದರ್ಭದಲ್ಲಿ ದೇಗುಲದ ಮಹಿಳಾ ಸಿಬ್ಬಂದಿವೋರ್ವರು ಹಣ ಎಗರಿಸಿ ಸಿಕಿಬಿದ್ದಿದ್ದು, ಸುಬ್ರಹ್ಮಣ್ಯ ಠಾಣಾ ಪೊಲೀಸರು ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಹಣದ ಹುಂಡಿ ಎಣಿಕೆಗಾಗಿ ದೇವಸ್ಥಾನದಿಂದ ಕೆಲವು ಸಿಬ್ಬಂದಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿತ್ತು. ದೇವಸ್ಥಾನದ ಸಿಬ್ಬಂದಿ ಗೌರಮ್ಮ ಎಂಬುವರು ಹಣ ಎಣಿಕೆ ಸಂದರ್ಭದಲ್ಲಿ ಹಣ ಕದ್ದು ಬಚ್ಚಿಟ್ಟುಕೊಳ್ಳುತ್ತಿರುವುದು ಭದ್ರತಾ ಸಿಬ್ಬಂದಿವೋರ್ವರ ಗಮನಕ್ಕೆ ಬಂದಿತ್ತು ಎನ್ನಲಾಗ್ತಿದೆ. ಹಣ ಎಗರಿಸುತ್ತಿರುವುದನ್ನು ಖಾತ್ರಿ ಪಡಿಸಿಕೊಂಡ ಮೇಲೆ ಈ ವಿಚಾರವನ್ನು ಭದ್ರತಾ ಸಿಬ್ಬಂದಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅವರು ಮಹಿಳೆಯನ್ನು ವಿಚಾರಣೆ ನಡೆಸಿದಾಗ ಮಹಿಳೆಯು ಹಣ ಅಡಗಿಸಿಟ್ಟಿಕೊಂಡಿರುವುದು ಗೊತ್ತಾಗಿದೆ. ಸುಮಾರು 10,640 ರೂಪಾಯಿ ಹಣವು ಪರಿಶೀಲನೆ ವೇಳೆ ಪತ್ತೆಯಾಯಿತು. ಬಳಿಕ ಮಹಿಳೆಯನ್ನು ಕುಕ್ಕೆ ಸುಬ್ರಹ್ಮಣ್ಯ ಪೊಲೀಸರಿಗೆ ಒಪ್ಪಿಸಲಾಯಿತು.
ಸುಬ್ರಹ್ಮಣ್ಯ ಠಾಣಾ ಪೊಲೀಸರು ಕಳ್ಳತನಕ್ಕೆ ಯತ್ನಿಸಿದ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.