ಮಂಗಳೂರು: ಕಾಫಿ ಡೇ ಮಾಲೀಕ ಸಿದ್ದಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ದೊರೆತಂತೆ ಕಾಣುತ್ತಿದೆ. ಸೋಮವಾರ ರಾತ್ರಿ ತಾನು ಮೀನಿಗಾಗಿ ಬಲೆ ಬೀಸುವಾಗ ನದಿಗೆ ಯಾರೋ ಬಿದ್ದಿರುವುದನ್ನು ನೋಡಿರುವುದಾಗಿ ಮೀನುಗಾರ ಸೈಮನ್ ಡಿಸೋಜಾ ಮಾಹಿತಿ ಕೊಟ್ಟಿದ್ದಾರೆ.
ನದಿಗೆ ಹಾರಿರುವುದನ್ನು ನಾನು ನೋಡಿದ್ದೇನೆ!: ಪ್ರತ್ಯಕ್ಷದರ್ಶಿ ಹೇಳಿಕೆ - ಪ್ರತ್ಯಕ್ಷದರ್ಶಿ ಸೈಮನ್ ಡಿಸೋಜಾ
ಸೋಮವಾರ ರಾತ್ರಿ ಮೀನಿಗಾಗಿ ಬಲೆ ಬೀಸುವಾಗ ನದಿಗೆ ಯಾರೋ ಬಿದ್ದಿರುವ ಶಬ್ದ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿ ಸೈಮನ್ ಡಿಸೋಜಾ ಮಾಹಿತಿ ನೀಡಿದ್ದಾರೆ.
ಮೀನುಗಾರ ಸೈಮನ್ ಡಿಸೋಜಾ
ತಕ್ಷಣ ನಾನು ಆ ಸ್ಥಳಕ್ಕೆ ಹೋಗುವಷ್ಟರಲ್ಲಿ ಆ ವ್ಯಕ್ತಿ ನದಿ ಆಳಕ್ಕೆ ಹೋಗಿದ್ದರು. ಈ ಹಿಂದೆ ಇಂತಹ ಹಲವಾರು ಘಟನೆಗಳು ನಡೆದಿವೆ ಎಂದಸೈಮನ್ ಡಿಸೋಜಾ ಹೇಳಿದ್ದಾರೆ. ಕಳೆದರಾತ್ರಿ ಸುಮಾರು 7 ರಿಂದ 7.30 ರ ಮಧ್ಯೆ ಈ ಘಟನೆ ನಡೆದಿತ್ತು. ಆದರೆ ನಾನು ಆ ವ್ಯಕ್ತಿಯನ್ನು ರಕ್ಷಿಸಲು ಧಾವಿಸುವಷ್ಟರಲ್ಲಿ ವ್ಯಕ್ತಿ ನೀರಿನಾಳಕ್ಕೆ ಹೋಗಿ ಆಗಿತ್ತು ಎಂದು ಹೇಳಿದ್ದಾರೆ.
ಈ ಹಿಂದೆ ನಡೆದ ಅನೇಕ ಆತ್ಮಹತ್ಯೆ ಪ್ರಕರಣಗಳಲ್ಲಿ ಜನರನ್ನು ರಕ್ಷಿಸಿರುವುದಾಗಿ ಅವರು ಮಾಹಿತಿ ನೀಡಿದ್ರು.