ಕರ್ನಾಟಕ

karnataka

ETV Bharat / state

ದೇವರ ನಿಂದನೆ ಆರೋಪ.. ಉಳ್ಳಾಲದಲ್ಲಿ ಉದ್ಯಮಿ ಬಂಧನ - ಹಿಂದೂ ದೇವರ ನಿಂದನೆ

ಸ್ವಾಲಿಝ್ ಇಕ್ಬಾಲ್ ದೇವರೊಂದರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಮೂರು ದಿನಗಳಿಂದ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗುತ್ತಿದ್ದಂತೆ, ಬಂಟ್ವಾಳ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇಂದು ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

staliz ikbaal
ಸ್ವಾಲಿಝ್ ಇಕ್ಬಾಲ್

By

Published : May 15, 2021, 1:44 PM IST

ಉಳ್ಳಾಲ: ದೇವರುಗಳನ್ನು ನಿಂದಿಸಿದ ಆರೋಪದಡಿ ತೊಕ್ಕೊಟ್ಟು ನಿವಾಸಿಯನ್ನು ಉಳ್ಳಾಲ ಪೊಲೀಸರು ಇಂದು ಬಂಧಿಸಿದ್ದಾರೆ.

ಆರೋಪಿ ದೇವರುಗಳ ವಿರುದ್ಧ ನಿಂದನೆಯ ಮಾತುಗಳನ್ನು ಆಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತೊಕ್ಕೊಟ್ಟು ಸ್ಮಾರ್ಟ್ ಸಿಟಿ ವಸತಿ ಸಂಕೀರ್ಣದಲ್ಲಿ ಇರುವ ಸ್ವಾಲಿಝ್ ಇಕ್ಬಾಲ್ (45) ಬಂಧಿತ.

ಫರ್ನೀಚರ್ ಅಂಗಡಿ ಸಹಿತ ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದ ಸ್ವಾಲಿಝ್ ಇಕ್ಬಾಲ್ ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೋ ಮೂರು ದಿನಗಳಿಂದ ವೈರಲ್ ಆಗಿತ್ತು. ಇದು ವೈರಲ್ ಆಗುತ್ತಿದ್ದಂತೆ, ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಕೆಲವರು ದೂರು ದಾಖಲಿಸಿದ್ದರು. ಅದರಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದ್ದು, ಇಂದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಬ್ಲಾಕ್ ಫಂಗಸ್ ರೋಗದ ಭೀತಿಯಲ್ಲಿ ಬಾಗಲಕೋಟೆ ಜನತೆ!

ABOUT THE AUTHOR

...view details