ಮಂಗಳೂರು: ಇಂದು ಪ್ರಕಟಗೊಂಡ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ದಕ್ಷಿಣಕನ್ನಡ ಜಿಲ್ಲೆಯ 17 ವಿದ್ಯಾರ್ಥಿಗಳು 625 ಅಂಕ ಗಳಿಸಿ ಟಾಪರ್ ಆಗಿದ್ದಾರೆ. ರಾಜ್ಯದಲ್ಲಿ 145 ವಿದ್ಯಾರ್ಥಿಗಳು 625 ಅಂಕ ಪಡೆದು ಟಾಪರ್ ಆಗಿದ್ದು, ಇದರಲ್ಲಿ 17 ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. ಮೂಡಬಿದ್ರೆ ಆಳ್ವಾಸ್ ಕನ್ನಡ ಮೀಡಿಯಂ ಶಾಲೆಯ 5 ವಿದ್ಯಾರ್ಥಿಗಳು, ಪುತ್ತೂರಿನ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯ 3 ವಿದ್ಯಾರ್ಥಿಗಳು ತಲಾ 625 ಅಂಕಗಳನ್ನು ಪಡೆದುಕೊಂಡಿದ್ದಾರೆ.
625 ಅಂಕ ಪಡೆದು ಟಾಪರ್ ಆದ ದ.ಕ ಜಿಲ್ಲೆಯ ವಿದ್ಯಾರ್ಥಿಗಳ ವಿವರ :
1. ರೋಶನ್ ಬೆಳ್ತಂಗಡಿ ತಾಲೂಕಿನ ಮೊರಾರ್ಜಿ ದೇಸಾಯಿ ರೆಸಿಡೆನ್ಸಿ ಶಾಲೆ, ಮಚ್ಚಿನ
2. ಸಾತ್ವಿಕ್ ಹೆಚ್ ಎಸ್ ಸುಳ್ಯ ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್, ಬೆಳ್ಳಾರೆ
3. ಸುಜಯ್ ಬಿ - ಬಂಟ್ವಾಳ ತಾಲೂಕಿನ ಶ್ರೀ ಸತ್ಯಸಾಯಿ ಲೋಕಸೇವಾ ಹೈಸ್ಕೂಲ್, ಅಳಿಕೆ
4. ಇಂದಿರ ಅರುಣ್ ನ್ಯಾಮಗೌಡರ್, ಮೂಡಬಿದ್ರೆ ತಾಲೂಕಿನ ಆಳ್ವಾಸ್ ಕನ್ನಡ ಮೀಡಿಯಂ ಶಾಲೆ, ಮೂಡಬಿದ್ರೆ
5.ಈರಯ್ಯ ಶ್ರೀಶೈಲ್ ಸೆಗುಣಸಿಮಠ್, ಮೂಡಬಿದ್ರೆ ತಾಲೂಕಿನ ಆಳ್ವಾಸ್ ಕನ್ನಡ ಮೀಡಿಯಂ ಶಾಲೆ, ಮೂಡಬಿದ್ರೆ
6.ಕಲ್ಮೇಶ್ವರ್ ಪುಂಡಲೀಕ ನಾಯಕ್, ಮೂಡಬಿದ್ರೆ ತಾಲೂಕಿನ ಆಳ್ವಾಸ್ ಕನ್ನಡ ಮೀಡಿಯಂ ಶಾಲೆ, ಮೂಡಬಿದ್ರೆ
7. ಶ್ರೇಯ ಆರ್ ಶೆಟ್ಟಿ, ಮೂಡಬಿದ್ರೆ ತಾಲೂಕಿನ ಆಳ್ವಾಸ್ ಕನ್ನಡ ಮೀಡಿಯಂ ಶಾಲೆ, ಮೂಡಬಿದ್ರೆ
8. ಸುದೇಶ್ ದತ್ತಾತ್ರೆಯ ಕಿಲ್ಲೆದರ್, ಮೂಡಬಿದ್ರೆ ತಾಲೂಕಿನ ಆಳ್ವಾಸ್ ಕನ್ನಡ ಮೀಡಿಯಂ ಶಾಲೆ, ಮೂಡಬಿದ್ರೆ