ಧರ್ಮಸ್ಥಳ: ಕಂಬಳ ಓಟಗಾರ ಶ್ರೀನಿವಾಸ ಗೌಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ವೀರೇಂದ್ರ ಹೆಗ್ಡೆಯವರ ಆಶೀರ್ವಾದ ಪಡೆದ ಕಂಬಳ ವೀರ ಶ್ರೀನಿವಾಸ ಗೌಡ - Srinivasa Gowda Visit Dharmasthala
ಕಂಬಳ ಓಟಗಾರ ಶ್ರೀನಿವಾಸ ಗೌಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ವೀರೇಂದ್ರ ಹೆಗ್ಡೆಯವರ ಆಶೀರ್ವಾದ ಪಡೆದ ಕಂಬಳ ವೀರ ಶ್ರೀನಿವಾಸ ಗೌಡ
ಈ ಸಂಧರ್ಭದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಶ್ರೀನಿವಾಸ ಗೌಡರನ್ನು ಅಭಿನಂದಿಸಿ ಕರಾವಳಿಯ ಪ್ರಾಚೀನ ಮತ್ತು ಪಾರಂಪರಿಕ ಕ್ರೀಡೆ ಕಂಬಳ ಕೂಟದಲ್ಲಿ ಇನ್ನಷ್ಟು ಸಾಧನೆಗಳು ಹೊರ ಹೊಮ್ಮಲಿ ಎಂದು ಶುಭ ಹಾರೈಸಿದರು.
ಈ ವೇಳೆ ಕಂಬಳ ಕ್ರೀಡೆ ತರಬೇತಿಯ ಕುರಿತು ಕಂಬಳ ಅಕಾಡೆಮಿ ಸದಸ್ಯ ಗುಣಪಾಲ ಕದಂಬ ಮಾಹಿತಿ ನೀಡಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಇರುವೈಲ್ ಪಾಣಿಲ ಕೋಣದ ಯಜಮಾನ ಸತೀಶ್ಚಂದ್ರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.