ಕರ್ನಾಟಕ

karnataka

ETV Bharat / state

ಖಾದರ್ ಮಾತಾಡುವಾಗ ತಮ್ಮ ಸರ್ಕಾರ ಮಾಡಿದ್ದನ್ನು ಯೋಚಿಸಲಿ: ಕೋಟಾ ಶ್ರೀನಿವಾಸ ಪೂಜಾರಿ - Former Minister U. T. Khadr

ಖಾದರ್ ಅವರು ಈಗಿನ ಸರ್ಕಾರವನ್ನು ಟೀಕೆ ಮಾಡುವ ಮೊದಲು ತಮ್ಮ ಸರ್ಕಾರ ಮಾಡಿದ್ದನ್ನು ತಿಳಿದು ಮಾತನಾಡಲಿ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Srinivas Poojari
ಖಾದರ್ ಮಾತಾಡುವಾಗ ತಮ್ಮ ಸರ್ಕಾರ ಮಾಡಿದ್ದನ್ನು ಯೋಚಿಸಲಿ: ಶ್ರೀನಿವಾಸ ಪೂಜಾರಿ

By

Published : Jun 1, 2020, 5:47 PM IST

ಮಂಗಳೂರು: ಮಾಜಿ ಸಚಿವ ಯು.ಟಿ.ಖಾದರ್ ಅವರು ಮಾತನಾಡುವಾಗ ತಮ್ಮ ಸರ್ಕಾರ ಇದ್ದಾಗ ಮಾಡಿದ್ದನ್ನು ಯೋಚಿಸಿ ಮಾತನಾಡಲಿ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಮಂಗಳೂರಿನಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಹೊರತುಪಡಿಸಿ ಉಳಿದ ರಾಜ್ಯಗಳಿಂದ ಬರುವವರಿಗೆ ಹೋಂ ಕ್ವಾರಂಟೈನ್ ಮಾಡಲಾಗುವುದು. ಮಹಾರಾಷ್ಟ್ರದಿಂದ ಬರುವವರಿಗೆ 7 ದಿನ ಸರ್ಕಾರಿ ಕ್ವಾರಂಟೈನ್ ಮಾಡಲಾಗುವುದು ಎಂದರು. ಮಾಜಿ ಸಚಿವ ಖಾದರ್ ಅವರು ಎರಡನ್ನೂ ಹೇಳುತ್ತಾರೆ. ಕ್ವಾರಂಟೈನ್ ಮಾಡದೆ ಬಿಡಿ ಎಂದು ಹೇಳುತ್ತಾರೆ. ಮನೆಗೆ ಕಳುಹಿಸಿದ ಬಳಿಕ ಪಾಸಿಟಿವ್ ಬಂದರೆ ಸರ್ಕಾರ ಕಾರಣ ಎನ್ನುತ್ತಾರೆ. ಲಾಕ್​ಡೌನ್ ಕಡ್ಡಾಯವಾಗಿ ಪಾಲಿಸಬೇಕು ಎನ್ನುತ್ತಾರೆ. ನಂತರ ತಾವೇ ಲಾಕ್​ಡೌನ್ ಮುರಿದು ಮನೆಗೆ ತಲುಪಿಸಿ ಮಾನವೀಯತೆ ಮೆರೆದೆ ಎನ್ನುತ್ತಾರೆ.ಖಾದರ್ ಅವರು ಈಗಿನ ಸರ್ಕಾರವನ್ನು ಟೀಕೆ ಮಾಡುವ ಮೊದಲು ತಮ್ಮ ಸರ್ಕಾರ ಮಾಡಿದ್ದನ್ನು ತಿಳಿದು ಮಾತನಾಡಲಿ ಎಂದು ಕಿವಿಮಾತು ಹೇಳಿದರು.

ABOUT THE AUTHOR

...view details