ಮಂಗಳೂರು: ವಿವಾಹ ವಾರ್ಷಿಕೋತ್ಸವ ಆಚರಿಸುವುದಕ್ಕೆಂದು ನಾನು ಹಾಗೂ ಪತ್ನಿ ಶ್ರೀದೇವಿಯೊಂದಿಗೆ ಶ್ರೀಲಂಕಾಕ್ಕೆ ಹೋಗಿದ್ದು, ಸಿನೆಮನ್ ಗ್ರ್ಯಾಂಡ್ ಎಂಬ ಹೋಟೆಲ್ನಲ್ಲಿ ಉಳಿದುಕೊಳ್ಳಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಟೂರ್ ಪ್ಯಾಕೇಜನ್ನು ಬದಲಾವಣೆ ಮಾಡಿದ ಕಾರಣ ನನಗೆ ಈಗ ಮಾತನಾಡುವ ಅವಕಾಶ ಸಿಕ್ಕಿದೆ... ಹೀಗೆಂದವರು ಭಯಾನಕ ಬಾಂಬ್ ದಾಳಿಯಿಂದ ಬಚಾವಾದ ದಂಪತಿ.
ಶ್ರೀಲಂಕಾ ಬಾಂಬ್ ಸ್ಫೋಟ ಪ್ರಕರಣ: ಸ್ವಲ್ಪದರಲ್ಲೇ ಬದುಕುಳಿದ ಮಂಗಳೂರು ಜೋಡಿ ಹೇಳಿದ್ದೇನು? - undefined
ಶ್ರೀ ವೇದಂ ಆಯುರ್ವೇದಿಕ್ ಮಲ್ಟಿ ಸ್ಪೆಷಲ್ ಆಸ್ಪತ್ರೆಯ ಮಾಲಿಕರೂ ಆಗಿರುವ ಡಾ.ಕೇಶವ ರಾಜ್ ಶ್ರೀಲಂಕಾದಲ್ಲಿ ತಮ್ಮ ಕಣ್ಣೆದುರಲ್ಲೇ ನಡೆದಿರುವ ಭಯಾನಕ ಚಿತ್ರಣಗಳ ಬಗ್ಗೆ ತಿಳಿಸಿದ್ದಾರೆ.
ಶ್ರೀಲಂಕಾ ಸರಣಿ ಸ್ಪೋಟದಲ್ಲಿ ಪಾರಾಗಿಬಂದ ಮಂಗಳೂರಿನ ಡಾ.ಕೇಶವರಾಜ್ ಈಟಿವಿ ಭಾರತ್ ದೊಂದಿಗೆ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನಗರದ ಕೆಪಿಟಿ ಸಮೀಪದ ಶರಬತ್ತು ಕಟ್ಟೆ ಎಂಬಲ್ಲಿರುವ ಶ್ರೀ ವೇದಂ ಆಯುರ್ವೇದಿಕ್ ಮಲ್ಟಿ ಸ್ಪೆಷಲ್ ಆಸ್ಪತ್ರೆಯ ಮಾಲಿಕರೂ ಆಗಿರುವ ಡಾ.ಕೇಶವ ರಾಜ್ ಶ್ರೀಲಂಕಾದಲ್ಲಿ ತಮ್ಮ ಕಣ್ಣೆದುರಲ್ಲೇ ನಡೆದಿರುವ ಭಯಾನಕ ಚಿತ್ರಣಗಳ ಬಗ್ಗೆ ಮಾತನಾಡುತ್ತಾ, ನಾವು ನೆಗೆಂಬೋ ಎಂಬಲ್ಲಿಗೆ ಹೋದಾಗ ಅಲ್ಲಿಂದ ಒಂದೂವರೆ ಕಿ.ಮೀ. ದೂರದಲ್ಲಿ ಚರ್ಚ್ ಮೇಲೆ ಬಾಂಬ್ ಸ್ಫೋಟ ಆಗಿತ್ತು. ಅಲ್ಲಿ ಪ್ರಾರ್ಥನೆ ಮಾಡುತ್ತಿರುವವರ ಮೇಲೆ ಆತ್ಮಾಹುತಿ ದಾಳಿಯಾಗಿ ಎಷ್ಟೋ ಜೀವಹಾನಿಯಾಗಿತ್ತು. ಅಲ್ಲೇ ಪಕ್ಕದ ಹೋಟೆಲ್ನಲ್ಲಿ ಸುಮಾರು 8.30 ಗಂಟೆ ಹೊತ್ತಿಗೆ ಏನೋ ದೊಡ್ಡದಾಗಿ ಸಿಡಿದ ಅನುಭವವಾಯಿತು. ಆದರೆ ಕೆಲಕ್ಷಣಗಳಲ್ಲೇ ಸಿಕ್ಕಾಪಟ್ಟೆ ಆ್ಯಂಬುಲೆನ್ಸ್ಗಳು, ಪೊಲೀಸ್ ವಾಹನಗಳು ಹೋಗುತ್ತಿತ್ತು. ನಮಗೆ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗಲಿಲ್ಲ ಎಂದು ಭಯಾನಕ ಕ್ಷಣಗನ್ನು ನೆನಪು ಮಾಡಿಕೊಂಡರು.
ಇನ್ನು, ಅದೇ ಸಮಯಕ್ಕೆ ನಮ್ಮ ಗೈಡ್ ಬಂದು, ಸಣ್ಣದೊಂದು ಸ್ಫೋಟ ಸಂಭವಿಸಿದೆ ಎಂದು ಹೇಳಿ ಸುಮಾರು 160 ಕಿ.ಮೀ. ದೂರದ ನೊವೆರೊಲಿಯಾ ಎಂಬಲ್ಲಿಗೆ ನಮ್ಮನ್ನು ಕರೆದೊಯ್ದರು ಎಂದು ಹೇಳಿದರು.