ಮಂಗಳೂರು: ನಗರದ ಬಪ್ಪನಾಡು ದೇವಾಲಯದ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ನಿನ್ನೆ ರಾತ್ರಿ ವಿಶಿಷ್ಟ ಶಯನ ಸೇವೆ ನೆರವೇರಿಸಲಾಯಿತು. ಈ ಹಿನ್ನೆಲೆಯಲ್ಲಿ ಭಕ್ತರು 2 ಕೋಟಿ ರೂ. ಮೌಲ್ಯದ ಮಲ್ಲಿಗೆ ಹೂವನ್ನ ಹರಕೆ ರೂಪದಲ್ಲಿ ನೀಡಿದರು. ಮಾರ್ಚ್ 17 ರಿಂದ ಬಪ್ಪನಾಡು ದೇವಾಲಯದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದೆ.
ಶ್ರೀ ಬಪ್ಪನಾಡು ದುರ್ಗೆ ಶಯನ ಸೇವೆ: 2 ಕೋಟಿ ರೂ. ಮೌಲ್ಯದ ಮಲ್ಲಿಗೆಯಲ್ಲಿ ದೇವಿ ಅಲಂಕಾರ - Durga Shyana pooja
ಮಂಗಳೂರಿನ ಬಪ್ಪನಾಡು ದುರ್ಗೆಯ ಶಯನ ಸೇವೆಗೆ ಸುಮಾರು 2 ಕೋಟಿ ರೂ. ಮೌಲ್ಯದ ಮಲ್ಲಿಗೆ ಹೂ ನಿನ್ನೆ ಸೇವಾ ರೂಪದಲ್ಲಿ ಹರಿದು ಬಂದಿತ್ತು.
![ಶ್ರೀ ಬಪ್ಪನಾಡು ದುರ್ಗೆ ಶಯನ ಸೇವೆ: 2 ಕೋಟಿ ರೂ. ಮೌಲ್ಯದ ಮಲ್ಲಿಗೆಯಲ್ಲಿ ದೇವಿ ಅಲಂಕಾರ ಶ್ರೀ ಬಪ್ಪನಾಡು ದುರ್ಗೆ ಶಯನ ಸೇವೆ](https://etvbharatimages.akamaized.net/etvbharat/prod-images/768-512-14820324-thumbnail-3x2-lek.jpg)
ಶ್ರೀ ಬಪ್ಪನಾಡು ದುರ್ಗೆ ಶಯನ ಸೇವೆ
ನಿನ್ನೆ ಬೆಳಗ್ಗೆ ಹಗಲು ರಥೋತ್ಸವ ನಡೆಯಿತು. ರಾತ್ರಿ ವೇಳೆ ದುರ್ಗೆಯು ಮಲ್ಲಿಗೆ ಹೂವಿನ ರಾಶಿಯಲ್ಲಿ ಮಲಗುವ ವಿಶಿಷ್ಟ ಶಯನ ಸೇವೆ ನೆರವೇರಿಸಲಾಯಿತು. ಈ ಶಯನ ಸೇವೆಗೆ ಭಕ್ತರು ಸುಮಾರು 2 ಕೋಟಿ ರೂ. ಮೌಲ್ಯದ ಚೆಂಡು ಮಲ್ಲಿಗೆ ಹೂವನ್ನ ಹರಕೆ ರೂಪದಲ್ಲಿ ನೀಡಿದರು. ನಿನ್ನೆ ಒಂದು ಅಟ್ಟೆ ಮಲ್ಲಿಗೆಗೆ 1,200 ರೂ. ದರವಿತ್ತು.
ಶ್ರೀ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವ
ಇದನ್ನೂ ಓದಿ:ತಲೆಗೆ ಕಲ್ಲು ಬಡಿದು ವ್ಯಕ್ತಿ ಸಾವು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ
Last Updated : Mar 24, 2022, 1:07 PM IST