ಮಂಗಳೂರು (ದ.ಕ): ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರು ಶೀಘ್ರ ಗುಣಮುಖರಾಗಲೆಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ ಮತ್ತು ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ ದಂಪತಿ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.
ಜನಾರ್ದನ ಪೂಜಾರಿ ಶೀಘ್ರ ಗುಣಮುಖರಾಗುವಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ನಿಂದ ವಿಶೇಷ ಪೂಜೆ - Narimoguru temple
ಕೊರೊನಾ ಸೋಂಕು ಇದೀಗ ಜನಪ್ರತಿನಿಧಿಗಳಿಗೂ ಹಬ್ಬುತ್ತಿದ್ದು, ಮೊನ್ನೆಯಷ್ಟೇ ಕಾಂಗ್ರೆಸ್ ಮಾಜಿ ಸಚಿವ ಜನಾರ್ದನ ಪೂಜಾರಿಗೂ ತಗುಲಿದೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದು, ಆದಷ್ಟು ಬೇಗ ಗುಣಮುಖರಾಗಲಿ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಶೇಷ ಪೂಜೆ ನೆರವೇರಿಸಲಾಗಿದೆ.
![ಜನಾರ್ದನ ಪೂಜಾರಿ ಶೀಘ್ರ ಗುಣಮುಖರಾಗುವಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ನಿಂದ ವಿಶೇಷ ಪೂಜೆ Special worship from the Puttur Block Congress for Janardhan Poojary speedy recovery](https://etvbharatimages.akamaized.net/etvbharat/prod-images/768-512-7942538-594-7942538-1594205485502.jpg)
ಜನಾರ್ದನ ಪೂಜಾರಿ ಶೀಘ್ರ ಗುಣಮುಖರಾಗುವಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ನಿಂದ ವಿಶೇಷ ಪೂಜೆ
ಜನಾರ್ದನ ಪೂಜಾರಿ ಶೀಘ್ರ ಗುಣಮುಖರಾಗುವಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ನಿಂದ ವಿಶೇಷ ಪೂಜೆ
ರಾಜ್ಯದ ಕಾರಣಿಕ ಕ್ಷೇತ್ರವೆನಿಸಿರುವ ಪುತ್ತೂರು ತಾಲೂಕಿನ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಸೇವೆ ನಡೆಸಿ ಮೃತ್ಯುಂಜಯ ಜಪ ಪಠಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾವು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ದಿವ್ಯನಾಥ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಪರಮೇಶ್ವರ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ರೈ ಅಂಕೊತ್ತಿಮಾರ್ ಮತ್ತಿತ್ತರರು ಉಪಸ್ಥಿತರಿದ್ದರು.