ಕರ್ನಾಟಕ

karnataka

ETV Bharat / state

ಸಂಬಂಧಿಕರು ಬರಲಿಲ್ಲ ಎಂಬ ಕೊರಗಿಗೆ ಬ್ರೇಕ್​: ಬಾಲಕಿಯ ವಿಶಿಷ್ಟ ಪರಿಕಲ್ಪನೆಯಲ್ಲಿ ನಡೆಯಿತು ಮದುವೆ - Mangalore Special wedding News

ಈ ಬಾಲಕಿ ಶುಭಾಶಯದ ವಿಡಿಯೋಗಳನ್ನು ಸಂಗ್ರಹಿಸಿ 'ನನ್ನೂ ಕೀ ಶಾದಿ' ಎಂಬ ಕ್ಲಿಪ್ ತಯಾರಿಸಿದ್ದಾರೆ. ಒಬ್ಬೊಬ್ಬ ಸದಸ್ಯರೂ ಡಿಫರೆಂಟ್ ಮೂಡಲ್ಲಿ ವಿಡಿಯೋ ಮಾಡಿದ್ದಾರೆ.

15ರ ಬಾಲೆಯ ಕಲ್ಪನೆಯಲ್ಲಿ ವಿಶಿಷ್ಟ ವಿವಾಹ
15ರ ಬಾಲೆಯ ಕಲ್ಪನೆಯಲ್ಲಿ ವಿಶಿಷ್ಟ ವಿವಾಹ

By

Published : Aug 14, 2020, 8:50 AM IST

Updated : Aug 14, 2020, 11:57 AM IST

ಮಂಗಳೂರು: ಕೊರೊನಾ ಸೋಂಕಿನ ಭೀತಿಯಿಂದ ಕುಟುಂಬಸ್ಥರೆಲ್ಲರೂ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ‌. ಆದ್ದರಿಂದ ಮಂಗಳೂರಿನಲ್ಲಿ 15ರ ಬಾಲೆಯೊಬ್ಬಳ ವಿಶಿಷ್ಟ ಕಲ್ಪನೆಯ ಮೂಲಕ ವಿವಾಹ ಕಾರ್ಯಕ್ರಮವೊಂದು ನಡೆದಿದೆ.

ಬಂಟ್ವಾಳ ತಾಲೂಕಿನ ಕನ್ಯಾನ ಸಮೀಪದ 'ಮುಗುಳಿ ಫ್ಯಾಮಿಲಿ'ಯ ಮುಗುಳಿ ಹಮೀದ್ ಎಂಬುವವರ ಸಹೋದರಿಯ ಮಗಳ ಮಗಳು ಆರ್ಕಿಟೆಕ್ಟ್ ಇಂಜಿನಿಯರ್ ನಫೀಸತ್ ನಹಾನ ಅವರ ಮದುವೆಯು ಚಿಕ್ಕಮಗಳೂರು ಉದ್ಯಮಿ ಇಸ್ಮಾಯಿಲ್ ರಾಖಿಬ್ ಜೊತೆಗೆ ಆಗಸ್ಟ್ 13 ರಂದು ಕೊಣಾಜೆಯ ಪಟ್ಟೋರಿಯಲ್ಲಿ ಅತ್ಯಂತ ಸರಳವಾಗಿ ಸರ್ಕಾರದ ನಿಯಮಾವಳಿ ಪ್ರಕಾರ 50 ಸದಸ್ಯರೊಳಗೆ ನೆರವೇರಿತು.

ಮುಗಳಿ ಹಮೀದ್​​​ರದ್ದು 8 ಮಂದಿ ಸಹೋದರಿಯರಿರುವ ತುಂಬು ಕುಟುಂಬ. ಇವರಿಷ್ಟು ಮಂದಿಯ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಭಾವಂದಿರು, ಅತ್ತಿಗೆ ಅಂತ 4 ತಲೆಮಾರಿನ ಮುಗುಳಿ ಕುಟುಂಬದಲ್ಲಿ 218 ಸದಸ್ಯರಿದ್ದಾರೆ. 218 ಮಂದಿ ಕುಟುಂಬ ಸದಸ್ಯರಿದ್ದರೂ ಕೇವಲ 50 ಮಂದಿ ಮಾತ್ರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ, ಈ ಸಂಭ್ರಮದಲ್ಲಿ ಪಾಲ್ಗೊಳ್ಳಲಾಗದ ಮುಗುಳಿ ಕುಟುಂಬದ ಬಹುತೇಕ ಸದಸ್ಯರಿಗೆ 15ರ ಹರೆಯದ ಝೋಯಾ ಎಂಬ ಬಾಲಕಿ ವಿಶೇಷ ಡಿಜಿಟಲ್ ಕಲ್ಪನೆಯ ಮೂಲಕ ಕುಟುಂಬ ಸದಸ್ಯರೆಲ್ಲರೂ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ.

ಝೋಯಾ ಮೊದಲಿಗೆ ಮುಗುಳಿ ಕುಟುಂಬದ 218 ಸದಸ್ಯರನ್ನು ಸೇರಿಸಿ 28 ನಿಮಿಷದ ಒಂದು ವಿಶೇಷ ವಿಡಿಯೋವನ್ನು ತಯಾರಿಸಿದ್ದಾರೆ. ಮುಗುಳಿ ಕುಟುಂಬದ ಹೆಚ್ಚಿನ ಸದಸ್ಯರು ಕಾಸರಗೋಡು ಭಾಗದಲ್ಲಿದ್ದು, ಅವರಿಗೂ ಭಾಗವಹಿಸಲಾಗುತ್ತಿಲ್ಲ. ಅದೇ ರೀತಿ ಯುಎಇ, ಸೌದಿ ಅರೇಬಿಯಾ, ಜರ್ಮನಿ, ನ್ಯೂಜಿಲ್ಯಾಂಡ್ ನಲ್ಲಿ ಕೂಡಾ ಕುಟುಂಬದ ಸದಸ್ಯರಿದ್ದಾರೆ.

ಅವರೆಲ್ಲರೂ ಶುಭಾಶಯದ ವಿಡಿಯೋಗಳನ್ನು ಸಂಗ್ರಹಿಸಿ 'ನನ್ನೂ ಕೀ ಶಾದಿ' ಎಂಬ ಕ್ಲಿಪ್ ತಯಾರಿಸಿದ್ದಾರೆ. ಒಬ್ಬೊಬ್ಬ ಸದಸ್ಯರೂ ಡಿಫರೆಂಟ್ ಮೂಡಲ್ಲಿ ವಿಡಿಯೋ ಮಾಡಿದ್ದಾರೆ. ಇದನ್ನು ವಿವಾಹದ ದಿನ ಡಿಜಿಟಲ್ ಸ್ಕ್ರೀನ್ ನಲ್ಲಿ ಪ್ರಸಾರ ಮಾಡಿ ಸಂಭ್ರಮಿಸಿದ್ದಾರಲ್ಲದೇ ಮದುವೆ ಗಡಿಬಿಡಿ ಮುಗಿದು ಸಂಜೆ ವೇಳೆ ಝೂಮ್ ಮೀಟಿಂಗ್ ನಡೆಸಿ ಪರಸ್ಪರ ಶುಭಾಶಯ, ಹರಟೆ, ಮಾತುಕತೆಯೊಂದಿಗೆ ಸಂತೋಷವನ್ನು ವಿನಿಮಯ ಮಾಡಿಕೊಂಡಿದ್ದಾರೆ.

28 ನಿಮಿಷದ ರೆಕಾರ್ಡೆಡ್ ವಿಡಿಯೋದಲ್ಲಿ ಮದುಮಗ, ಮದುಮಗಳಿಗೆ ಶುಭಾಶಯ, ಕುರಾನ್ ಪಾರಾಯಣ, ಪ್ರಾರ್ಥನೆ, ಹಿರಿಯರ ಮತ್ತು ಕಿರಿಯರ ವೈಶಿಷ್ಟ್ಯಪೂರ್ಣ ಶುಭಹಾರೈಕೆ, ಮದುವೆಗೆ ಅಲಂಕರಿಸಿ ಹೊರಡುವ ಸನ್ನಿವೇಶದ ಜೊತೆಗೆ ಕುಟುಂಬದ ಪ್ರತಿಭಾನ್ವಿತ ಮಕ್ಕಳ ಡ್ಯಾನ್ಸ್, ಹಾಡು ಮೊದಲಾದ ಮನರಂಜನೆಯೂ ಅಡಕವಾಗಿದೆ. ಝೋಯಾ ಕಲ್ಪನೆಯ ಈ ವಿಶೇಷ ಡಿಜಿಟಲ್ ವಿವಾಹಕ್ಕೆ ಆಕೆಯ ತಾಯಿ ದಂತವೈದ್ಯೆ ಜಮೀಲಾ ಸಹಕಾರ ನೀಡಿದ್ದಾರೆ. ಕುಟುಂಬ ಸದಸ್ಯರಾದ ಇಂಜಿನಿಯರ್ ಸವಾದ್ ಮೊಗ್ರಾಲ್, ಡಾ. ಇಜಾಝ್ ಜಮಾಲ್ ಕಾಸರಗೋಡು ತಾಂತ್ರಿಕ ಸಹಕಾರ ನೀಡಿದ್ದಾರೆ.

Last Updated : Aug 14, 2020, 11:57 AM IST

ABOUT THE AUTHOR

...view details